Thursday, January 15, 2026

ರೈತರ ಬಸವ ತತ್ವ ಉಳಿಸಲು ಗ್ರಾಮಕ್ಕೊಂದು 'ನಂದಿ ಸೇನೆ' ಸ್ಥಾಪನೆ ಕಾರ್ಯಕ್ರಮ

 


ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಪ್ರಾರಂಭವಾದ *ನಂದಿ ಕೂಗು* ಅಭಿಯಾನದ ಅಡಿಯಲ್ಲಿ ರೈತರ ಬಸವ ತತ್ವದಿಂದ ಸ್ವಾವಲಂಬಿ ಗ್ರಾಮ‌ಗಳನ್ನು ನಿರ್ಮಿಸಲು *'ಗ್ರಾಮಕ್ಕೊಂದು ನಂದಿ ಸೇನೆ'* ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ.

ರೈತರ ಬಸವ ತತ್ವ ಎಂದರೇನು?
ಗ್ರಾಮಗಳಲ್ಲಿ ರೈತರು ಪೂಜಿಸುವ ನಾಲ್ಕು ಕಾಲಿನ ಜೀವಂತ ಬಸವಣ್ಣಗಳು ಅಥವಾ ನಂದಿಗಳು ಅಥವಾ ಎತ್ತುಗಳ ಸಂಖ್ಯೆ ಕಡಿಮೆಯಾದಂತೆ ಗ್ರಾಮಗಳು ಸರ್ವ ರೀತಿಯಲ್ಲಿ ಪರಾವಲಂಬಿಗಳಾಗಿ ಗ್ರಾಮೀಣ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಹಾಗಾಗಿ, ನಾಲ್ಕು ಕಾಲಿನ ಬಸವಣ್ಣಗಳ ಶಕ್ತಿಯ ಬಳಕೆಯಿಂದ ಗ್ರಾಮೀಣ ಜನರ ಕಾಯಕ ಹಾಗೂ ದಾಸೋಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಗ್ರಾಮಗಳನ್ನು ಸ್ವಾವಲಂಬಿ ಹಾಗೂ ಆರೋಗ್ಯಯುತವಾಗಿ ಇಡುವ ಕಲೆಗೆ ರೈತರ ಬಸವ ತತ್ವ ಎಂದು ಕರೆಯಲಾಗುತ್ತದೆ.

 ನಾಲ್ಕು ಕಾಲಿನ ಬಸವಣ್ಣಗಳು ಅಥವಾ ನಂದಿ ಶಕ್ತಿಯಿಂದ ಸ್ವಾವಲಂಬಿ ಗ್ರಾಮ‌ ನಿರ್ಮಿಸುವುದರ ಜೊತೆಗೆ ಆರೋಗ್ಯಯುತ ಸಮಾಜ ನಿರ್ಮಿಸಲು ಬಯಸುವ ದೂರದೃಷ್ಟಿಯ ನಾಯಕರು ತಮ್ಮ ಗ್ರಾಮಗಳಲ್ಲಿ 'ನಂದಿ ಸೇನೆ' ಎಂಬ ಸಂಘ ಸ್ಥಾಪಿಸಿ ಬೆಳೆಸಲು ಪ್ರಾರಂಭಿಸಬಹುದಾಗಿದೆ.

................................................
🙏🇮🇳 ಹಿನ್ನೆಲೆ: 🇮🇳🙏


ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಕೃಷಿ ಪದವೀಧರರ ನೇತೃತ್ವದಲ್ಲಿ ಪ್ರಾರಂಭಿಸಿದ ನಂದಿ ಕೂಗು ಅಭಿಯಾನದ ವತಿಯಿಂದ ರಾಜ್ಯಾದ್ಯಂತ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ರೈತರ ಬಸವ ತತ್ವ ಅಥವಾ ನಂದಿ ತತ್ವದ ಕುರಿತು ಅರಿವು ಮೂಡಿಸಲು ಪ್ರಯತ್ನಿಸಲಾಗಿದೆ. ಮುಂದುವರೆದು, ಶ್ರೀ ಸಿದ್ಧೇಶ್ವರ ಶ್ರೀಗಳ 3ನೇ ಪುಣ್ಯ ಸ್ಮರಣೆ ಅಂಗವಾಗಿ ಆಯೋಜಿಸಿದ 330 ಜೋಡೆತ್ತಿನ ಬಂಡಿಗಳ ಸಮಾವೇಶದ ಸಂದರ್ಭದಲ್ಲಿ *'ನಂದಿ ಸೇನೆ'* ಎಂಬ ರಾಷ್ಟ್ರ ಮಟ್ಟದ ಸಂಘಟನೆ ಸ್ಥಾಪನೆಗೆ ವೈಕುಂಠ ಏಕಾದಶಿಯ ದಿನವಾದ 30-12-2025 ರ ಮಂಗಳವಾರ ಚಾಲನೆ ನೀಡಲಾಯಿತು. ಪೂಜ್ಯರಿಗೆ ಜ್ಞಾನೋದಯವಾದ ಸ್ಥಳವಾದ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಶ್ರೀ ಸನ್ಯಾಸಪ್ಪನ ಮಠ (ರಾಮೇಶ್ವರ ಮಠ) ದಲ್ಲಿ ನಂದಿ ಸೇನೆ ಸಂಘಟನೆಗೆ ಚಾಲನೆ ದೊರೆಯಿತು. 

ನಂದಿ ಸೇನೆ ಸಂಘಟನೆಗೆ ಚಾಲನೆ ನೀಡಿದವರ ವಿವರ:

1. ಶ್ರೀ ಶಶಿಕಾಂತ ಗುರೂಜಿ, ಗೌರವಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ. 
2. ಶ್ರೀ ಸೋಮಲಿಂಗ ಅಜ್ಜನವರು, ಸಾಹಿತಿ ಹಾಗೂ ಶ್ರೀ ಸಿದ್ಧೇಶ್ವರ ಶ್ರೀಗಳ ಸಹೋದರ
3. ಶ್ರೀ ಚುನ್ನಪ್ಪ ಪೂಜಾರಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
4. ಶ್ರೀ ಭೀಮಸೇನ ಕೋಕರೆ, ರಾಜ್ಯಾಧ್ಯಕ್ಷರು, ಭಾರತೀಯ ಕಿಸಾನ್ ಸಂಘ
5. ಶ್ರೀ ವೆಂಕನಗೌಡ ಪಾಟೀಲ, ನಿರ್ದೇಶಕರು, ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು
6. ಶ್ರೀ ಮಲ್ಲಿಕಾರ್ಜುನ ಲಕ್ಕಪ್ಪ ಕೋರಿ, ಅಂತರಾಷ್ಟ್ರೀಯ ಕೃಷಿ ಉದ್ದಿಮೆದಾರರು, ಕೀನ್ಯಾ

 ನಂದಿ ಸೇನೆ ಉದ್ದೇಶ: ರೈತರ ಬಸವ ತತ್ವ ಅಥವಾ ನಂದಿ ಶಕ್ತಿಯ ಬಳಕೆಯಿಂದ ಸ್ವಾವಲಂಬಿ ಗ್ರಾಮಗಳನ್ನು ಬೆಳೆಸಿ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವುದು.

 ನಂದಿ ಸೇನೆ ಗುರಿ: ರೈತರ ಬಸವ ತತ್ವ ಪುನಶ್ಚೇತನಕ್ಕಾಗಿ ರಾಜ್ಯ ಸರ್ಕಾರ 10 ಪ್ರತಿಶತ ಬಡ್ಜೆಟ್ ಮೀಸಲಿಡುವ ಕಾನೂನು ಜಾರಿಗೆ ತಂದು ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತರುವಂತೆ ಮಾಡುವುದು. ಈ ಮೂಲಕ ಮುಂದಿನ 10 ವರ್ಷಗಳಲ್ಲಿ 10 ಪಟ್ಟು ನಂದಿ ಸಂಪತ್ತು ಹೆಚ್ಚಿಸಿ ಸ್ವಾವಲಂಬಿ ಹಾಗೂ ಆರೋಗ್ಯಯುತ ಗ್ರಾಮಗಳನ್ನು ನಿರ್ಮಿಸುವುದು.

 ನಂದಿ ಸೇನೆ ಬೆಳೆಸುವ ಪ್ರಕ್ರಿಯೆ: ಹೊಸ ತಂತ್ರಜ್ಞಾನಗಳಿಂದ ನಂದಿ ವಿದ್ಯತ್, ನಂದಿ ಗ್ಯಾಸ್,  ಅಮೃತಯುಕ್ತ ಆಹಾರ, ಜೈವಿಕ ಗೊಬ್ಬರ ಹಾಗೂ ಔಷಧಿಗಳನ್ನು ಗ್ರಾಮಗಳಲ್ಲಿ ತಯಾರಿಸುವುದು. ನಾಯಕರು, ನಂದಿ ಕೃಷಿಕರು, ನಂದೀಶ್ವರನ ಆರಾಧಕರು ಹಾಗೂ ಆಹಾರ ಸೇವಿಸುವವರ ನೇತೃತ್ವದಲ್ಲಿ ನಂದಿ ಸೇನೆ ಸಂಘಟನೆ ಬೆಳೆಸುತ್ತಾ ಸಾಗಿ ಸ್ವಾವಲಂಬಿ ರಾಷ್ಟ್ರ ನಿರ್ಮಾಣ ಮಾಡುವುದು. 

 ನಂದಿ ಸೇನೆ ಸಂಘಟನೆ ಕೇಂದ್ರಗಳು: ಬಸವ ತತ್ವ ಅಥವಾ ನಂದಿ ಶಕ್ತಿಯ ಸಮರ್ಥ ಬಳಕೆಯಿಂದ ಹಿಂದೆ ನಿರ್ಮಿಸಲಾಗಿರುವ ರಾಷ್ಟ್ರದ ವಿವಿಧ ಶಕ್ತಿ ಕೇಂದ್ರಗಳು ಅಥವಾ ಧಾರ್ಮಿಕ ಕೇಂದ್ರಗಳ ಆಧಾರಿತವಾಗಿ ನಂದಿ ಸೇನೆಯನ್ನು ಸಂಘಟಿಸುವುದು.

 ನಂದಿ ಸೇನೆ ಗುರುತು: ಜೋಡೆತ್ತಿನ ರೈತರಿಗೆ ಸಂತರ ನಂತರದ ಸ್ಥಾನ ನೀಡಿ ಕಾಶಿ ಕೆಂಪು ಬಣ್ಣದ ವಸ್ತ್ರ ಹಾಗೂ ನಂದಿ ಸೇನೆ ಎಂದು ಬರೆದಿರುವ ಟೋಪಿ ಹಾಕಿ ಗೌರವಿಸುವುದು.

 ಪ್ರಮುಖ ಮಾರ್ಗದರ್ಶಕರು:

1. ಡಾ ಚಂದ್ರಶೇಖರ ಬಿರಾದಾರ, ಅಂತರಾಷ್ಟ್ರೀಯ ಕೃಷಿ ವಿಜ್ಞಾನಿಗಳು, ಬೆಂಗಳೂರು
2. ಡಾ ವಿ ಆಯ್ ಬೆಣಗಿ, ವಿಶ್ರಾಂತ ಉಪ ಕುಲಪತಿಗಳು, ಕೃಷಿ ವಿಶ್ವ ವಿದ್ಯಾಲಯ, ಧಾರವಾಡ
3. ಶ್ರೀ ಮಲ್ಲಿಕಾರ್ಜುನ ಹಟ್ಟಿ, ಖ್ಯಾತ ಸಿರಿಧಾನ್ಯ ಹೊಟೇಲ್ ಉದ್ದಿಮೆದಾರರು, ವಿಜಯಪುರ





.............................................
 🙏🇮🇳 ಮುನ್ನೆಲೆ🇮🇳🙏

ಗ್ರಾಮಗಳಲ್ಲಿ ನಂದಿ ಸೇನೆ ಸಂಘಟನೆ ಬೆಳೆಸುವ ಜವಾಬ್ದಾರಿ ಯಾರು ಹೊರಬೇಕು?

1. ನಾಯಕರು: ಹಿಂದೆ ರೈತರ ಬಸವ ತತ್ವವನ್ನು ಅನುಷ್ಠಾನಕ್ಕೆ ತಂದ ರಾಜ ಮಹಾರಾಜರು ಶ್ರೇಷ್ಠ ಸಾಮ್ರಾಜ್ಯಗಳನ್ನು ನಿರ್ಮಿಸಿ ಇತಿಹಾಸದ ಪುಟ ಸೇರಿದ ಉದಾಹರಣೆಗಳಿವೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಜನನಾಯಕರಾದ ಗ್ರಾಮ ಪಂಚಾಯತಿ ಸದಸ್ಯರು, ತಾಲೂಕು ಪಂಚಾಯತಿ ಸದಸ್ಯರು, ಶಾಸಕರು ಹಾಗೂ ಸಂಸದರು, ತಮ್ಮ ತಮ್ಮ ಮತ ಕ್ಷೇತ್ರದಲ್ಲಿ ರೈತರ ಬಸವ ತತ್ವವನ್ನು ಅನುಷ್ಠಾನಕ್ಕೆ ತಂದು ಗ್ರಾಮಗಳನ್ನು ಸ್ವಾವಲಂಬಿಗೊಳಿಸಿ ಆರೋಗ್ಯಯುತ ಸಮಾಜ ನಿರ್ಮಿಸಬೇಕಾದ ಅವಶ್ಯಕತೆ ಬಂದೊದಗಿದೆ. ರೈತರ ಬಸವ ತತ್ವವನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುವವರಿಗೆ ಮತ ನೀಡುವ ಹಾಗೂ ಮತ ಪಡೆದು ನಾಯಕರಾಗುವ ಇಬ್ಬರಿಗೂ ಕೂಡ ಒಳಿತಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಂದಿ ಸೇನೆಯನ್ನು ಕಟ್ಟಿ ಬೆಳೆಸುವ ಜವಾಬ್ದಾರಿಯನ್ನು ಹೊರುವ ನಾಯಕರು ಮಾತ್ರ ನಿಜವಾದ ಜನನಾಯಕರು ಎಂದು ಗುರುತಿಸುವ ದಿನಗಳು ಈಗಾಗಲೇ ಪ್ರಾರಂಭವಾಗಿವೆ. ಹಾಗಾಗಿ, ಭವಿಷ್ಯದಲ್ಲಿ ರಾಜಕೀಯ ನಾಯಕರ ಭವಿಷ್ಯ ರೈತರ ಬಸವ ತತ್ವದ ಮೇಲೆ ನಿಲ್ಲುವುದು ನಿಶ್ಚಿತವಾಗಿದೆ.
2. ನಂದಿ / ಜೋಡೆತ್ತಿನ ಕೃಷಿಕರು: ಬಸವ ತತ್ವದ ಮೂಲ ವಾರಸುದಾರರಾದ ನಂದಿ ಅಥವಾ ಜೋಡೆತ್ತಿನ ಕೃಷಿಕರು ಹಾಗೂ ಆಕಳು ಸಾಕಾಣಿಕೆದಾರರು ಒಂದಾಗಿ ತಮ್ಮ ಶ್ರಮಕ್ಕೆ ತಕ್ಕ ಬೆಲೆ ನೀಡುವ ಕಾನೂನು ಹಾಗೂ ಯೋಜನೆ ಜಾರಿಗೆ ತರಲು ಪ್ರತಿ ಗ್ರಾಮ ಮಟ್ಟದಲ್ಲಿ ಸಂಘಟಿತರಾಗಿ ಆಗ್ರಹಿಸಬೇಕಾಗಿದೆ. ರೈತರ ಬಸವ ತತ್ವಕ್ಕೆ ಪೂರಕ ಕಾನೂನು ಹಾಗೂ ಯೋಜನೆ ಜಾರಿಗೆ ತಂದು ಜನರಿಗೆ ಆರೋಗ್ಯ ನೀಡಲು ಬಯಸುವ ನಾಯಕರಿಗೆ ಮತ ನೀಡುವ ಸಂಕಲ್ಪ ಮಾಡಬೇಕು.
3. ನಂದೀಶ್ವರನ ಆರಾಧಕರು: ಅನೇಕ ಜನರ ಮನೆಯ ದೇವರು ನಾಲ್ಕು ಕಾಲಿನ ಬಸವಣ್ಣ ಅಥವಾ ನಂದೀಶ್ವರ ನಾಗಿದ್ದಾನೆ. ಬಹು ಜನರ ಮನೆಯ ಜಗುಲಿಯ ಮೇಲೆ ನಂದಿ ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ. ಶಿವನ ಆರಾಧಕರು ಶಿವಲಿಂಗದ ಮುಂದಿರುವ ನಂದಿಗೆ ತಲೆ ಬಾಗುತ್ತಾರೆ. ಇವರೆಲ್ಲರೂ, ಒಂದಾಗಿ ವಾಸ್ತವದಲ್ಲಿ ನಂದಿ ಸಂಪತ್ತನ್ನು ಹೆಚ್ಚಿಸಲು ತನು ಮನ ಧನವನ್ನು ಕೂಡಿಸಿ ಪ್ರಯತ್ನಿಸಿ ನಂಬಿದ ದೇವರ ಕೃಪೆಗೆ ಪಾತ್ರರಾಗುವ ಅವಕಾಶ ಬಂದೊದಗಿದೆ. ಅದಕ್ಕಾಗಿ, ನಂದೀಶ್ವರನ ಆರಾಧಕರು ನಂದಿ ಸೇನೆಯನ್ನು ಸಂಘಟಿಸಿ ತಮ್ಮ ಗ್ರಾಮದಲ್ಲಿ ನಂದಿ ಸಂತತಿಯನ್ನು ಹೆಚ್ಚಿಸುವ ಜವಾಬ್ದಾರಿ ಹೊರಬೇಕಾಗಿದೆ. ರೈತರ ಬಸವ ತತ್ವ ಪುನಶ್ಚೇತನಗೊಳಿಸಲು ಬಯಸುವ ನಾಯಕರಿಗೆ ಪಕ್ಷಾತೀತವಾಗಿ ಮತ ಮೀಸಲಿಡುವ ಸಂಕಲ್ಪ‌ ಮಾಡುವುದು.
4. ಆಹಾರ ಸೇವಿಸುವವರು: ಆಹಾರ ಸೇವಿಸುವ ಪ್ರತಿಯೊಬ್ಬರೂ ಕೂಡ ಜವಾಬ್ದಾರಿ ಹೊರಬೇಕಾಗಿದೆ. ಏಕೆಂದರೆ, ಹಿಂದೆ ನಾಲ್ಕು ಕಾಲಿನ ಬಸವಣ್ಣಗಳ ಉಳುಮೆಯಿಂದ ನಿರ್ಮಾಣವಾದ ಫಲವತ್ತಾದ ಜಮೀನುಗಳಲ್ಲಿ ಬೆಳೆದ ಆಹಾರ ಸೇವಿಸುತ್ತಾ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಆದರೆ, ಇಂದು ನಾಲ್ಕು ಕಾಲಿನ ಬಸವಣ್ಣಗಳ ಬಸವ ತತ್ವದ ಬದಲು ತೈಲ ತತ್ವ ಆಧಾರಿತ ಯಂತ್ರ ಹಾಗೂ ರಾಸಾಯನಿಕ ಕೃಷಿ ಹೆಚ್ಚಾದಂತೆ ನಾವು ತಿನ್ನುವ ಆಹಾರ ವಿಷಮಯವಾಗಿ ರೋಗಗ್ರಸ್ತ ಸಮಾಜ ನಿರ್ಮಾಣವಾಗುತ್ತಿದೆ. ಇದು ಜಗತ್ತಿನಲ್ಲಿ ರೋಗ ಕ್ರಾಂತಿಯನ್ನು ಉಂಟು ಮಾಡುತ್ತಿದೆ. ಅದಕ್ಕಾಗಿ, ತಮಗೆ ಹಾಗೂ ತಮ್ಮ ಮಕ್ಕಳಿಗೆ ಉತ್ತಮ ಆಹಾರ ಬೇಕೆನ್ನುವವರು ನಂದಿ ಸೇನೆ ಸಂಘಟನೆ ಬೆಳೆಸುವ ಜವಾಬ್ದಾರಿ ಹೊರಬೇಕಾಗಿದೆ. ರೈತರ ಬಸವ ತತ್ವ ಪುನಶ್ಚೇತನಗೊಳಿಸಲು ಬಯಸುವ ನಾಯಕರಿಗೆ ಪಕ್ಷಾತೀತವಾಗಿ ಮತ ಮೀಸಲಿಡುವ ಸಂಕಲ್ಪ‌ ಮಾಡುವುದು.

ಹೆಚ್ಚಿನ‌ ಮಾಹಿತಿಗಾಗಿ ಸಂಪರ್ಕಿಸಿ: missionsavesoil.com


Monday, December 15, 2025

ಬನ್ನಿ! ಬಸವ ತತ್ವದಿಂದ ಸ್ವಾವಲಂಬಿ ಗ್ರಾಮ‌ಗಳನ್ನು ನಿರ್ಮಿಸಲು ಒಂದಾಗೋಣ.

ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ 3ನೇ ಪುಣ್ಯ ಸ್ಮರಣೆಯ ಅಂಗವಾಗಿ ನಂದಿ ಕೂಗು ಅಭಿಯಾನದ ಅಡಿಯಲ್ಲಿ ಕನಿಷ್ಟ 330 ಜೋಡೆತ್ತಿನ ಬಂಡಿಗಳ ಸಮಾವೇಶ ಹಾಗೂ ಬಸವ ತತ್ವದಿಂದ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸುವ ಕುರಿತು ವೈಜ್ಞಾನಿಕ ಚಿಂತನೆ ಕಾರ್ಯಕ್ರಮ ಜರಗುವುದು.

ಸ್ಥಳ: ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಆಧ್ಯಾತ್ಮಿಕ ಪ್ರಪಂಚಕ್ಕೆ ಪಾದಾರ್ಪಣೆ ಮಾಡಲು ಮೊದಲು ಪ್ರೇರಣೆ ನೀಡಿದ ಬಿಜ್ಜರಗಿ ಗ್ರಾಮದ ಶ್ರೀ ಸನ್ಯಾಸಪ್ಪನ ಮಠ (ರಾಮೇಶ್ವರ ಮಠ), ತಾ: ತಿಕೋಟಾ ಜಿ: ವಿಜಯಪುರ  

ದಿನಾಂಕ: ವೈಕುಂಠ ಏಕಾದಶಿಯ ದಿನವಾದ 30-12-2025 ರ ಮಂಗಳವಾರ ಮುಂಜಾನೆ 10 ಗಂಟೆಗೆ

 🇳🇪 ವಿಷಯ ವಿಶ್ಲೇಷಣೆ 🇳🇪

 ಬಸವ ತತ್ವದಿಂದ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸುವ ಕುರಿತು ವೈಜ್ಞಾನಿಕ ಚಿಂತನೆ

ಬಸವ ತತ್ವವೆಂದರೆ ಜೋಡೆತ್ತಿನ ರೈತರು ತಮ್ಮ ಕಾಯಕದಿಂದ ಪಂಚ ಮಹಾಭೂತಗಳ ಜೀವಂತಿಕೆಯನ್ನು ಉಳಿಸುವುದರ ಜೊತೆಗೆ ಕಾಯಕ ಹಾಗೂ ದಾಸೋಹ ಸಂಸ್ಕೃತಿ ನಾಶವಾಗದಂತೆ‌ ನೋಡಿಕೊಳ್ಳುವ ಕಲೆ‌ ಎಂದು ಅರ್ಥ. ಜೋಡೆತ್ತಿನ ರೈತರು ಉಳಿದರೆ ಮಾತ್ರ ಬಸವ ತತ್ವ ಉಳಿಯುವುದು ಎಂಬುದು ಇಂದಿನ ಆಧುನಿಕ ವಿಜ್ಞಾನ, ಇತಿಹಾಸ ಹಾಗೂ ವಚನ ಸಾಹಿತ್ಯದಿಂದ ಸ್ಪಷ್ಟವಾಗಿ ತಿಳಿದು ಬರುತ್ತದೆ. ಜೋಡೆತ್ತಿನ ಕೃಷಿಕರು ಹೆಚ್ಚಿಗೆ ಉಳಿದಿರುವ ಗ್ರಾಮಗಳಲ್ಲಿ ಪಂಚ ಮಹಾಭೂತಗಳು ಶುದ್ಧವಾಗಿ ಉಳಿದಿರುವುದರ ಜೊತೆಗೆ ಬಹು ಜನರಿಗೆ ಉದ್ಯೋಗದ ಭದ್ರತೆ ಇರುವುದನ್ನು ವೈಜ್ಞಾನಿಕವಾಗಿ ಪರೀಕ್ಷೆ ಮಾಡಿ ನೋಡಬಹುದಾಗಿದೆ.

ಐದು ಸಾವಿರ ವರ್ಷಗಳ ಹಿಂದೆ ನೈಸರ್ಗಿಕ ವಿಕೋಪದಿಂದ ವಿಶ್ವ ಪ್ರಸಿದ್ಧವಾದ ಸಿಂಧೂ ನದಿ ಕಣಿವೆಯ ಹರಪ್ಪಾ ಮೊಹೆಂಜೋದಾರೊ ನಾಗರೀಕತೆ ನಾಶವಾದಂತೆ, ಇಂದು ನೈಸರ್ಗಿಕ ವಿಕೋಪ ಅಥವಾ ಮಹಾಯುದ್ಧದಿಂದ ಭಾರತ ದೇಶಕ್ಕೆ ಮುಂದಿನ ಐದು ವರ್ಷಗಳ ವರೆಗೆ ತೈಲ ಪೂರೈಕೆ ಸಂಪೂರ್ಣವಾಗಿ ನಿಂತು ಹೋದರೆ, ಜೋಡೆತ್ತಿನ ಕೃಷಿಕರಿರುವ ಭೂ ಪ್ರದೇಶದ ಮಠ‌ ಮಾನ್ಯಗಳ ಕಾಯಕ ಹಾಗೂ ದಾಸೋಹ ಮಾತ್ರ ಜೀವಂತವಾಗಿ ಉಳಿಯಲು ಸಾಧ್ಯವಾಗುವುದು‌. ಹಾಗಾಗಿ, ಕಾಯಕ ಹಾಗೂ ದಾಸೋಹದ ಜೀವಂತಿಕೆ ನಾಲ್ಕು ಕಾಲಿನ ಬಸವಣ್ಣಗಳ ಸಂತತಿಯನ್ನು ಅವಲಂಬಿಸಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಕ್ರಿಸ್ತಶಕ 6 ರಿಂದ 12 ನೇ ಶತಮಾನದ ಕಾಲಘಟ್ಟದಲ್ಲಿ ಜೋಡೆತ್ತಿನ ಕೃಷಿಕರ ಬಸವ ತತ್ವದ ಅನುಷ್ಠಾನದಿಂದ ರಾಜರುಗಳು ಸುಸಂಸ್ಕೃತ ಸಮಾಜ ನಿರ್ಮಿಸಿದರು. ರಾಷ್ಟ್ರಕೂಟರು, ಚಾಲುಕ್ಯರು, ಚೋಳರು, ಹೊಯ್ಸಳರು, ಕದಂಬರು, ಪಲ್ಲವರು, ಪಾಂಡ್ಯರು ಹೀಗೆ ಅನೇಕ ಸಾಮ್ರಾಜ್ಯದ ರಾಜರುಗಳು ಜೋಡೆತ್ತಿನ ಕೃಷಿಕರ ಬಸವ ತತ್ವದ ಅನುಷ್ಠಾನದಿಂದ ಶ್ರೇಷ್ಠ ಸಾಮ್ರಾಜ್ಯಗಳನ್ನು‌ ನಿರ್ಮಿಸಿದ ನಂತರ ವಿವಿಧ ಹೆಸರಿನ ಶಿವಾಲಯಗಳನ್ನು ನಿರ್ಮಿಸಿ ಶಿವಲಿಂಗದ ಮುಂದೆ ನಂದಿ ಮೂರ್ತಿ ಪ್ರತಿಷ್ಠಾಪಿಸಿದರು. ಜೋಡೆತ್ತಿನ ಕೃಷಿಕರ ಬಸವ ತತ್ವದ ಅನುಷ್ಠಾನದ ಫಲದಿಂದ ನಿರ್ಮಿತವಾದ ಲಕ್ಷಾಂತರ ಶಿವಾಲಯಗಳು ಭಾರತ ದೇಶದ ಬಹು ಜನರ ಆರಾಧ್ಯ ದೈವವಾಗಿ ತಲೆ ಎತ್ತಿ ನಿಂತಿವೆ. ಪ್ರತಿಯೊಂದು ಶಿವಾಲಯದಲ್ಲಿರುವ ನಂದಿ ಮೂರ್ತಿಯು ಭಾರತ ದೇಶದ ಕೃಷಿಕರ ಭಾವೈಕ್ಯತೆಯ ಸಂಕೇತವಾಗಿವೆ
"ಕೃಷಿ ಕೃತ್ಯ ಕಾಯಕ ಮಾಡುವ ಸದ್ಭಕ್ತನ ಪಾದವ ತೋರಿ‌ ಬದುಕಿಸಯ್ಯಾ, ಆತನ ತನು ಶುದ್ಧ, ಆತನ‌ ಮನ ಶುದ್ಧ, ಆತನ ಮನೆ ಹೊಕ್ಕು ಲಿಂಗಾರ್ಚನೆ ಮಾಡುವ ಗುರು ಪಾವನ ನೋಡಾ ಕೂಡಲ‌ ಸಂಗಮದೇವ" ಎಂಬ ವಚನದ ಮೂಲಕ ವಿಶ್ವಗುರು ಬಸವಣ್ಣನವರು ಜೋಡೆತ್ತಿನ ಕೃಷಿಕರ ಬಸವ ತತ್ವದ ಮಹತ್ವವನ್ನು ತಿಳಿಸಿದ್ದಾರೆ. ಸಮಾಜದಲ್ಲಿ ಜೋಡೆತ್ತಿನ ಕೃಷಿಕರ ಪಾದಗಳ ಕೊರತೆಯಾದರೆ ಸಮಾಜದ‌ ಮಾರ್ಗದರ್ಶಕರಾದ ಗುರುಗಳಿಗೆ ಭವಿಷ್ಯವಿಲ್ಲವೆಂಬುದನ್ನು ಬಸವಣ್ಣನವರು ಸ್ಪಷ್ಟವಾಗಿ ತಿಳಿಸಿದ್ದಾರೆ. ನಂದಿಯು ಯುಗ ಯುಗಾಂತರಗಳಿಂದ ಗುರು ಶಿಷ್ಯ ಪರಂಪರೆಯ ಮೂಲ ಕೊಂಡಿಯಾಗಿ ಕೆಲಸ‌ ಮಾಡುತ್ತಾ ಬರುತ್ತಿರುವ ಕಾರಣ ಗುರುವೆಂಬ ಲಿಂಗದ ಮುಂದೆ ಅಥವಾ ಗುರುವಿನ ಸಮಾಧಿಯ‌ ಮೇಲೆ ನಂದಿ‌ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತಿದೆ.

   

ಕಳೆದ ಕೆಲವು ದಶಕಗಳಲ್ಲಿ ಜೋಡೆತ್ತಿನ ಕೃಷಿಕರ ಬಸವ ತತ್ವಕ್ಕೆ ವಿರುದ್ಧವಾದ ಪೆಟ್ರೋಲ್ ಹಾಗೂ ಡೀಸೆಲ್ ಆಧಾರಿತ ತೈಲ ತತ್ವಕ್ಕೆ ಸರ್ಕಾರಗಳು ಹೆಚ್ಚು ಆದ್ಯತೆ ನೀಡುತ್ತಾ ಬಂದ ಕಾರಣ ಜೋಡೆತ್ತಿನ ಕೃಷಿಕರು ನಾಶವಾಗಿ ಗ್ರಾಮಗಳು ಸರ್ವ ರೀತಿಯಲ್ಲಿ ಪರಾವಲಂಬಿಗಳಾಗುತ್ತಾ ಸಾಗುತ್ತಿವೆ. ಜೋಡೆತ್ತಿನ ಕೃಷಿಕರ ಸಂಖ್ಯೆ ಕಡಿಮೆಯಾದಂತೆ ಗ್ರಾಮಗಳಲ್ಲಿ ಇತರ ಪಶು ಸಂಪತ್ತು ನಾಶವಾಗಿ ಎಲ್ಲ ರೈತರಿಗೂ ಕೂಡ ತಿಪ್ಪೆ ಗೊಬ್ಬರದ ಕೊರತೆಯಾಗುತ್ತಿದೆ. ಇದರಿಂದ ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗಿ ಬೆಳೆಗಳ ಗುಣಮಟ್ಟ ಮತ್ತು ಇಳುವರಿ ಕುಂಠಿತವಾಗುತ್ತಿದೆ. ಜೋಡೆತ್ತಿನ ಕೃಷಿ ನಾಶವಾದಂತೆ ರೈತರ ಸಾಗುವಳಿ ವೆಚ್ಚ ಹೆಚ್ಚಾಗುತ್ತಿದೆ. ರೈತರ ಸಾಲ ಹೆಚ್ಚಾಗುತ್ತಿದೆ. ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ದಿನಕಳೆದಂತೆ ರೈತರು ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ.  ಅದಕ್ಕಾಗಿ, ಜೋಡೆತ್ತಿನ‌ ಕೃಷಿಕರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತಂದು ಬಸವ ತತ್ವ ಉಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೂಡ ಕೈ ಜೋಡಿಸಬೇಕಾದ ಅವಶ್ಯಕತೆ ಬಂದೊದಗಿದೆ.   

 
ಆಧುನಿಕ ತಂತ್ರಜ್ಞಾನಗಳಿಂದ ನಂದಿ ಶಕ್ತಿಯನ್ನು ಸಮರ್ಥವಾಗಿ ಬಳಕೆ‌ ಮಾಡಿಕೊಂಡು ವಿದ್ಯುತ್, ಗ್ಯಾಸ್, ಅಮೃತಯುಕ್ತ ಆಹಾರ, ಜೈವಿಕ ಗೊಬ್ಬರ ಹಾಗೂ ಔಷಧಿಗಳನ್ನು ಉತ್ಪಾದಿಸುವ ಸಮಗ್ರ ಯೋಜನೆಯನ್ನು ಜಾರಿಗೆ ತಂದು ರೈತರನ್ನು ಹಾಗೂ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕಾಗಿದೆ. ಅದಕ್ಕಾಗಿ, ರೈತ ನಾಯಕರು, ಔದ್ಯೋಗಿಕ ನಾಯಕರು, ರಾಜಕೀಯ‌ ನಾಯಕರು ಹಾಗೂ ಆಧ್ಯಾತ್ಮಿಕ‌ ನಾಯಕರು ಒಗ್ಗೂಡಿ ಜೋಡೆತ್ತಿನ ಕೃಷಿಕರ ಬಸವ ತತ್ವದ ಅನುಷ್ಠಾನದಿಂದ ಗ್ರಾಮಗಳನ್ನು ಸ್ವಾವಲಂಬಿ ಗಳನ್ನಾಗಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಹೊಸ ತಂತ್ರಜ್ಞಾನಗಳು ಹಾಗೂ ಜೊಡೆತ್ತಿನ‌ ಕೃಷಿಕರ ಬಸವ ತತ್ವದ ಅನುಷ್ಠಾನದಿಂದ ಗ್ರಾಮಗಳನ್ನು ಸ್ವಾವಲಂಬಿ ಗಳನ್ನಾಗಿ ಮಾಡಬಹುದಾದ ಸಾಧ್ಯತೆಯ ಕುರಿತು‌ ವೈಜ್ಞಾನಿಕವಾಗಿ ಚಿಂತನೆ‌ ಮಾಡುವ ಉದ್ದೇಶದಿಂದ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸರ್ವರಿಗೂ ಕೂಡ ಒಳಿತನ್ನು ಉಂಟುಮಾಡುವ ಕಾರ್ಯವಾಗಿದೆ...ಯೋಚಿಸಿ!


ಬಸವ ತತ್ವದಿಂದ ಗ್ರಾಮಗಳನ್ನು ಸ್ವಾವಲಂಬಿ ಗೊಳಿಸುವ ಸಾಧ್ಯತೆಯ ಕುರಿತು ಬರೆದಿರುವ  *ಜೈ ನಂದಿ ಜೈ ಜಗತ್'* ಪುಸ್ತಕ ಪಡೆಯಲು ಸಂಪರ್ಕಿಸಿ:

 https://drive.google.com/file/d/1vhlKlRA5v17fecKBtEKzgP6UwGyKl7hk/view?usp=drivesdk


ಬಸವ ತತ್ವದಿಂದ ಸ್ವಾವಲಂಬಿ ಗ್ರಾಮ‌ ನಿರ್ಮಿಸುವ ಕುರಿತು ದಿನನಿತ್ಯ ಮಾಹಿತಿ ಪಡೆಯಲು ನಂದಿ ಕೂಗು ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ:
https://chat.whatsapp.com/ISXmGKm5WFF4ycv431Tsnm?mode=hqrt2 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 

9449662047 / 9110885321 

missionsavesoil.com


 

 

Monday, December 8, 2025

ನಂದಿ ಶಕ್ತಿಯಿಂದ ಸ್ವಾವಲಂಬಿ ಭಾರತ ನಿರ್ಮಿಸುವ ಸಾಧ್ಯತೆ ಪರಿಚಯಿಸುವ 'ಜೈ ನಂದಿ ಜೈ ಜಗತ್' ಕಾರ್ಯಕ್ರಮ

 

ಧಾರವಾಡದ ಡಾ. ದಾಕ್ಷಾಯಣಿ ಚಿದಾನಂದ ರಾಮನಗೌಡರ ಎಂಬ ವೈದ್ಯ ದಂಪತಿಗಳು ಅತ್ಯಂತ ಭಕ್ತಿಯಿಂದ ನಿರ್ಮಿಸಿದ ಅಮೃತ ಗೋಧಾಮದಲ್ಲಿ ನಂದಿ ಶಕ್ತಿಯಿಂದ ಸ್ವಾವಲಂಬಿ ಭಾರತ ನಿರ್ಮಾಣದ ಸಾಧ್ಯತೆ ಪರಿಚಯಿಸುವ 'ಜೈ ನಂದಿ ಜೈ ಜಗತ್' ಕಾರ್ಯಕ್ರಮವನ್ನು ದಿನಾಂಕ 07-12-2025 ರಂದು ಶ್ರೀ ಲಿಂಗ ಭೈರವಿ ದೇವಿ ಪೂಜೆಯ ಮೂಲಕ ಪ್ರಾರಂಭಿಸಲಾಯಿತು. ಡಾ.ರಾಮನಗೌಡರ ಕುಟುಂಬದ ಸದಸ್ಯರು ವೃತ್ತಿಯಿಂದ ವೈದ್ಯಕೀಯ ಸೇವೆಯಲ್ಲಿ ತೊಡಗಿ ಧಾರವಾಡ ಜಿಲ್ಲೆಯಲ್ಲಿ ಸುಪ್ರಸಿದ್ಧಿಯಾಗಿರುವ ವಿಶೇಷ ಕುಟುಂಬ. ಈ ಕುಟುಂಬದ ಸದಸ್ಯರು ಮುಂದಿನ ಜನಾಂಗದ ಆರೋಗ್ಯಕ್ಕೆ ಅವಶ್ಯವಿರುವ ನಂದಿ ಶಕ್ತಿ ಕೇಂದ್ರ ನಿರ್ಮಾಣದ ಚಿಂತನೆಗೆ ಮುಂದಾಗಿರುವುದು ಅವರ ದೂರ ದೃಷ್ಟಿಕೋನಕ್ಕೆ ಹಿಡಿದ ಕನ್ನಡಿಯಾಗಿದೆ.  ವೈದ್ಯರಾದ ಡಾ. ದಾಕ್ಷಾಯಣಿ ಅಕ್ಕನವರು ಕಳೆದ 8 ವರ್ಷಗಳಿಂದ ತಮ್ಮ ಜೀವನವನ್ನು ಸಂಪೂರ್ಣವಾಗಿ ನಂದಿ ಸಂತತಿಯ ಸೇವೆಗಾಗಿ ಮುಡಿಪಾಗಿಟ್ಟು 47 ಹಸುಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿರುವ ಆಧುನಿಕ ಯುಗದ ಶ್ರೇಷ್ಠ ಶರಣೆಯಾಗಿದ್ದಾರೆ. ವೈದ್ಯ ವೃತ್ತಿಯೊಂದಿಗೆ ಪತ್ನಿಯ ಕೆಲಸಕ್ಕೆ ಸರ್ವ ರೀತಿಯಲ್ಲಿ ಬೆಂಬಲವಾಗಿ ನಿಂತಿರುವ ಡಾ. ಚಿದಾನಂದ ಅವರು ಶ್ರೀ ಧನ್ವಂತರಿ ದೇವರು ಮೆಚ್ಚುವಂತಹ ಕೆಲಸದಲ್ಲಿ ನಿರತರಾಗಿದ್ದಾರೆ.   


ದೂರ ದೃಷ್ಟಿಕೋನದಿಂದ ಹೆಜ್ಜೆ ಇಡುತ್ತಾ ಬಂದ ನಾಯಕರು ಮಾತ್ರ ಇತಿಹಾಸ ನಿರ್ಮಿಸಿದ ಉದಾಹರಣೆಗಳಿವೆ. ನಂದಿ ಶಕ್ತಿಯ ಸಮರ್ಥ ಬಳಕೆಯ ಮೂಲಕ ಸುಂದರ ಸಮಾಜ ನಿರ್ಮಿಸಲು ಪ್ರಯತ್ನಿಸಿದ ಭಾರತ ದೇಶದ ರಾಜ ಮಹಾರಾಜರುಗಳು ಇಂದಿಗೂ ಕೂಡ ಬಹು ಜನರಿಗೆ ದೊಡ್ಡ ಸ್ಪೂರ್ತಿಯಾಗಿ ನಿಂತಿದ್ದಾರೆ. 6 ರಿಂದ 12ನೇ ಶತಮಾನದ ಕಾಲಘಟ್ಟದಲ್ಲಿ ಅನೇಕ ರಾಜರುಗಳು ನಂದಿ ಶಕ್ತಿಯ ಸಮರ್ಥ ಬಳಕೆಯಿಂದ ಸುಸಂಸ್ಕೃತ ಸಮಾಜ ನಿರ್ಮಿಸಿದ ನಂತರ ಅತ್ಯಂತ ವಿಶೇಷತೆಯಿಂದ ಕೂಡಿದ ಶಿವಾಲಯಗಳನ್ನು ನಿರ್ಮಾಣ ಮಾಡಿದರು. ನಂದಿ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡು ಸುಂದರ ಸಮಾಜ ನಿರ್ಮಿಸಿದ ಕುರುಹುಗಳಾಗಿ ಅಂದಿನ ಅನೇಕ ಶಿವಾಲಯಗಳು ಇಂದಿಗೂ ಕೂಡ ಜೀವಂತವಾಗಿ ಉಳಿದಿವೆ. ಅನಾದಿ ಕಾಲದಿಂದ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ನಂದಿಯು ದಿಕ್ಸೂಚಿಯಾಗಿ ಕೆಲಸ ಮಾಡಿದ ಕಾರಣಕ್ಕಾಗಿ ಪ್ರತಿಯೊಂದು ಶಿವಾಲಯದ ಶಿವಲಿಂಗದ ಮುಂದೆ ನಂದಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಮುಂದಾಳತ್ವದಲ್ಲಿ ಆಧ್ಯಾತ್ಮಿಕ ಕ್ರಾಂತಿ ಘಟಿಸಲು ಮೂಲ ಕಾರಣ ನಂದಿ ಶಕ್ತಿಯ ಸಮರ್ಥ ಬಳಕೆಯಿಂದ ನಿರ್ಮಾಣವಾದ ಸುಸಂಸ್ಕೃತ ಸಮಾಜಿಕ ವ್ಯವಸ್ಥೆಯಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. "ಜೋಡೆತ್ತಿನ ಕೃಷಿಕನ ಮನೆಯಲ್ಲಿ ಲಿಂಗಾರ್ಚನೆ ಮಾಡಿಕೊಳ್ಳುವ ಗುರುವಿನ ಜೀವನ ಪಾವನವಾಗುವುದು" ಎಂದು ವಿಶ್ವಗುರು ಬಸವಣ್ಣನವರು ಹೇಳಿದ ಮಾತು ಸಮಾಜದ ಆರೋಗ್ಯ ನಂದಿ ಶಕ್ತಿಯ ಮೇಲೆ ನಿಂತಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಬಸವಣ್ಣನವರ ಮಾತಿನಂತೆ ಇಂದು ಡಾ. ರಾಮನಗೌಡರ ಕುಟುಂಬವು ನಂದಿ ಶಕ್ತಿ ಕೇಂದ್ರ ನಿರ್ಮಾಣದ ಮೂಲಕ ಜನರಿಗೆ ಆರೋಗ್ಯದ ಭಾಗ್ಯ ಕಲ್ಪಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ.

ಕಳೆದ ಕೆಲವು ದಶಕಗಳಲ್ಲಿ ಸರ್ಕಾರಗಳು ತೈಲ ಶಕ್ತಿ ಬಳಕೆಗೆ ಪ್ರೋತ್ಸಾಹ ಹೆಚ್ಚಿಗೆ‌ ನೀಡಿ ನಂದಿ ಶಕ್ತಿ ಬಳಕೆಯನ್ನು ನಿರ್ಲಕ್ಷ ಮಾಡಿದ ಕಾರಣ ಗ್ರಾಮಗಳು ಸರ್ವ ರೀತಿಯಲ್ಲಿ ಪರಾವಲಂಬಿಗಳಾಗುತ್ತಾ ಸಾಗುತ್ತಿವೆ. ಭೂಮಿಯ ಮೇಲೆ ತೈಲ ಶಕ್ತಿಯು ಅಸುರಿ ಶಕ್ತಿಯನ್ನು ವೃದ್ಧಿ ಮಾಡಿದರೆ ನಂದಿ ಶಕ್ತಿಯು ದೈವಿಕ ಶಕ್ತಿಯನ್ನು ವೃದ್ಧಿ ಮಾಡುವುದು. 'ಕತ್ತಲನ್ನು ಹೋಗಲಾಡಿಸಲು ಬೆಳಕಿಗೆ ಮಾತ್ರ ಸಾಧ್ಯ' ಎನ್ನುವಂತೆ ಪುನಃ ನಂದಿ ಶಕ್ತಿಯ ಮೂಲಕ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸಲು ನಾವಿಂದು  ಪ್ರಯತ್ನಿಸಬೇಕಾಗಿದೆ. ಹೊಸ ತಂತ್ರಜ್ಞಾನಗಳ ಮೂಲಕ ನಂದಿ ಶಕ್ತಿಯನ್ನು ಸಮರ್ಥವಾಗಿ ಬಳಕೆ‌ ಮಾಡಿಕೊಂಡು ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿ‌ ಮಾಡಬಹುದಾದ ಅನೇಕ ವೈಜ್ಞಾನಿಕ ಆವಿಷ್ಕಾರಗಳು ಈಗಾಗಲೇ ಅಭಿವೃದ್ಧಿಯಾಗಿವೆ. ಈ ಸತ್ಯವನ್ನು ಪರಿಚಯಿಸುವ ಉದ್ದೇಶದಿಂದ 'ಜೈ ನಂದಿ ಜೈ ಜಗತ್' ಎಂಬ ವೈಜ್ಞಾನಿಕ ಚಿಂತನಾ ಕಾರ್ಯಕ್ರಮವನ್ನು ನಂದಿ ಸಂತತಿಯನ್ನು ಪೋಷಿಸುತ್ತಿರುವ ರೈತರ ಜಮೀನುಗಳಲ್ಲಿ ಆಯೋಜಿಸಲಾಗುತ್ತಿದೆ.

ನಂದಿ ಶಕ್ತಿಯಿಂದ ವಿದ್ಯುತ್, ಗ್ಯಾಸ್, ಗಾಣದ ಎಣ್ಣೆ, ಅಮೃತಯುಕ್ತ ಆಹಾರ, ಜೈವಿಕ ಗೊಬ್ಬರ ಹಾಗೂ ಔಷಧಿಗಳನ್ನು ತಯಾರಿಸಿ ಮಾರಾಟ ಮಾಡಬಹುದಾದ ನಂದಿ ಶಕ್ತಿ ಕೇಂದ್ರಗಳನ್ನು ನಿರ್ಮಿಸಿ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಬಹುದಾದ ಮಾರ್ಗೋಪಾಯದ ಕುರಿತು ಚಿಂತನೆ ಮಾಡುವುದು 'ಜೈ ನಂದಿ ಜೈ ಜಗತ್' ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ರೈತ ನಾಯಕರು, ಔದ್ಯೋಗಿಕ ನಾಯಕರು, ರಾಜಕೀಯ ನಾಯಕರು ಹಾಗೂ ಆಧ್ಯಾತ್ಮಿಕ ನಾಯಕರು ಒಗ್ಗೂಡಿ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸುವ  ಕುರಿತು ಚರ್ಚಿಸಲಾಗುವುದು. ನಂದಿ ಶಕ್ತಿಯಿಂದ ಸ್ವಾವಲಂಬಿ ರೈತ ಕುಟುಂಬಗಳು ನಿರ್ಮಾಣವಾದರೆ ಮಾತ್ರ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸಲು ಸಾಧ್ಯವಾಗುವುದು. ಸ್ವಾವಲಂಬಿ ಗ್ರಾಮಗಳು ನಿರ್ಮಾಣವಾದರೆ ಮಾತ್ರ ಭಾರತವು ಸ್ವಾವಲಂಬಿ ರಾಷ್ಟ್ರವಾಗಲು ಸಾಧ್ಯವಾಗುವುದು. ನಂದಿ ಶಕ್ತಿಯಿಂದ ಯಾವಾಗ ರಾಷ್ಟ್ರವು ಸ್ವಾವಲಂಬಿ ಆಗುವುದೋ ಅಂದು ಭಾರತವು ಜಗತ್ತಿಗೆ ವಿಶ್ವ ಗುರುವಾಗಲು ಸಾಧ್ಯವಾಗುವುದು....ಯೋಚಿಸಿ!
ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ನಂದಿ ಗ್ರಾಮ‌ ಸ್ವರಾಜ್ಯದ ಕುರಿತು ಬರೆದಿರುವ  *ಜೈ ನಂದಿ ಜೈ ಜಗತ್'* ಪುಸ್ತಕ ಪಡೆಯಲು ಸಂಪರ್ಕಿಸಿ: https://drive.google.com/file/d/1vhlKlRA5v17fecKBtEKzgP6UwGyKl7hk/view?usp=drivesdk


ಸದ್ಗುರು ಅವರ ಶ್ರೀ ಲಿಂಗ ಭೈರವಿ ದೇವಿ ಸಾಧನ ಹಾಗೂ ಇತರ ಯೋಗ ಸಾಧನಗಳ ಮಹತ್ವದ ಕುರಿತು ಬರೆದ *ಸಾಧ್ಯತೆ* ಪುಸ್ತಕ ಪಡೆಯಲು ಸಂಪರ್ಕಿಸಿ: https://drive.google.com/file/d/10iO4AD23tTi-_YLhURqu3Ja4nBe5sohr/view?usp=sharing

...........................................
ಬಸವರಾಜ ಬಿರಾದಾರ
ನಾಯಕತ್ವ ಸಲಹೆಗಾರರು
9449303880 / missionsavesoil.com


Monday, November 10, 2025

ಸುಗರ್ ರಿಕವರಿ ಹೆಚ್ಚಿಸುವ ಎತ್ತುಗಳು ಕಾಸಾಯಿಖಾನೆ ಪಾಲು-ರೈತರು ಬೀದಿ ಪಾಲು

 


ಭಾರತ ದೇಶದಲ್ಲಿ ಎತ್ತುಗಳ ಶಕ್ತಿಯ ಬಳಕೆ ಎಷ್ಟು ಕಡಿಮೆಯಾಗುವುದೋ ಅಷ್ಟು ಬೇಗನೆ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಯುಗ ಅಂತ್ಯವಾಗುವುದು ಎಂಬುದನ್ನು ವೈಜ್ಞಾನಿಕ ಅಂಕಿ‌ ಅಂಶಗಳು ಸ್ಪಷ್ಟವಾಗಿ ತಿಳಿಸುತ್ತಿವೆ. ಕರ್ನಾಟಕ ರಾಜ್ಯದ ಕಬ್ಬು ಬೆಳೆಗಾರರು ಬೀದಿಗೆ ಬಂದು ಪ್ರತಿ ಟನ್ ಕಬ್ಬಿಗೆ ರೂ. 3300 ಪಡೆಯಲು ಯಶಸ್ವಿಯಾಗಿದ್ದಾರೆ. ರೈತರ ಈ ಯಶಸ್ಸು ರಾಜ್ಯದ ಬಹು ಸಂಖ್ಯೆ ರೈತರನ್ನು ಒಗ್ಗೂಡಿಸಲು ಪ್ರಾರಂಭಿಸಿದೆ. ಮುಂದೆ ಇದು ದೇಶವ್ಯಾಪಿಯಾಗಿ ಬೆಳೆದು ದೊಡ್ಡ ಚಳುವಳಿಯ ರೂಪ‌ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಯೊಬ್ಬ ರೈತನನ್ನು ಎಚ್ಚರಿಸಬಹುದಾದ ಸಮಾಜದಲ್ಲಿ ನಾವಿರುವುದರಿಂದ ರೈತರು ಖಂಡಿತ ಒಗ್ಗೂಡಲು ಪ್ರಾರಂಭಿಸುವರು. ಅನೇಕ ಆಧ್ಯಾತ್ಮಿಕ ನಾಯಕರು ಕೂಡ ರೈತ ಸಂಘಟನೆಗೆ ಬೆನ್ನೆಲುಬಾಗಿ ನಿಂತಿರುವುದರಿಂದ ಸಂಘಟನಾ ಶಕ್ತಿ ಮುಂದಿನ ದಿನಗಳಲ್ಲಿ ಖಂಡಿತ ವೃದ್ಧಿಸುವುದು. ಮುಂದಿನ ವರ್ಷಗಳಲ್ಲಿ ದೇಶದ ರೈತರು ಸಂಘಟಿತವಾಗಿ ಹೋರಾಟ‌ ಮಾಡಿ ಸಕ್ಕರೆ ಕಾರ್ಖಾನೆಗಳು ರೈತರ‌‌ ಬೇಡಿಕೆಗೆ ಶರಣಾಗುವಂತೆ ಮಾಡುವವು. ಇಂತಹ ಸಂದರ್ಭದಲ್ಲಿ ದೂರ ದೃಷ್ಟಿಕೋನವಿರುವ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ಮಾತ್ರ ಮುಂದಿನ ದಿನಗಳಲ್ಲಿ ಒಳ್ಳೆಯ‌ ಭವಿಷ್ಯ ಕಂಡುಕೊಳ್ಳಲು ಸಾಧ್ಯವಿದೆ.

ನೀರು ಇಲ್ಲದೆ ಮರ ಜೀವಂತವಾಗಿ ಇರಲು ಹೇಗೆ ಸಾಧ್ಯವಿಲ್ಲವೋ,‌ ಅದೇ ರೀತಿ ಎತ್ತುಗಳ‌ ಶಕ್ತಿಯನ್ನು ಬಳಸಿಕೊಳ್ಳದಿದ್ದರೆ ಬಯಲು ಸೀಮೆಯ ಮಣ್ಣಿನ ಜೀವಂತಿಕೆ‌‌ ಉಳಿಸಲು ಸಾಧ್ಯವಿಲ್ಲ. ಎತ್ತುಗಳ‌ ಉಳುಮೆಯು ಬಯಲು ಸೀಮೆಯ ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಕಾಪಾಡುವ ಸುಂದರ ನೈಸರ್ಗಿಕ ವ್ಯವಸ್ಥೆಯಾಗಿದೆ. ನಂದಿ ಸಂಪತ್ತು ಕಾಸಾಯಿಖಾನೆಯ ಪಾಲಾಗುವುದು ಹೆಚ್ಚಾದಂತೆ ಎಲ್ಲ‌ ಬೆಳೆಗಳ ಇಳುವರಿ ಕುಂಠಿತವಾಗುತ್ತಿವೆ. ಅತೀ ಹೆಚ್ಚು ಪೋಷಕಾಂಶಗಳನ್ನು ಬೇಡುವ ಕಬ್ಬಿನ ಬೆಳೆ ಕ್ಷೇತ್ರ ಹೆಚ್ಚಾಗುತ್ತಾ ಸಾಗಿದಂತೆ ನಂದಿ ಸಂಪತ್ತು ನಾಶ ಆಗುತ್ತಿರುವುದರಿಂದ ಕಬ್ಬಿನ ಇಳುವರಿ ಹಾಗೂ ಗುಣಮಟ್ಟ ಕುಂಠಿತವಾಗುತ್ತಿದೆ. ಇದರ ದುಷ್ಪರಿಣಾಮ ಸುಗರ್ ರಿಕವರಿ ಕಡಿಮೆ ಆಗುವ ಮೂಲಕ ವ್ಯಕ್ತವಾಗುತ್ತಿದೆ. ಎತ್ತಿನ ಕೃಷಿ ಕಡಿಮೆಯಾದಂತೆ ಬಯಲು ಸೀಮೆಯ ಹಲವು ಜಿಲ್ಲೆಗಳ ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಈಗಾಗಲೇ 0.5 ಪ್ರತಿಶತಕ್ಕಿಂತ ಕಡಿಮೆಯಾಗಿರುವುದು ಆತಂಕಕಾರಿ ಸಂಗತಿಯಾಗಿದೆ.

ಎತ್ತಿನ ಉಳುಮೆಯು ಮಣ್ಣಿನ ಸಾವಯವ ಇಂಗಾಲದ‌ ಪ್ರಮಾಣ ಕಾಪಾಡುವ ಶ್ರೇಷ್ಠ ನೈಸರ್ಗಿಕ ತಂತ್ರಜ್ಞಾನವಾಗಿದೆ. ಎತ್ತಿನ ಕೃಷಿಯಿಂದ ಇತರ ಪಶು ಸಂಪತ್ತು ಉಳಿದು ಭೂಮಿಗೆ ಅವಶ್ಯವಿರುವ ತಿಪ್ಪೆ ಗೊಬ್ಬರ ಎಲ್ಲ ರೈತರಿಗೆ‌ ಕಡಿಮೆ ದರದಲ್ಲಿ ದೊರೆತು‌ ಮಣ್ಣಿನ ಫಲವತ್ತತೆ ಉಳಿಯಲು ಸಾಧ್ಯವಾಗುವುದು. ಮಹಾರಾಷ್ಟ್ರದ ಕೆಲವು ಭಾಗದಲ್ಲಿ ಕಬ್ಬಿನ ಸುಗರ್ ರಿಕವರಿ ಹೆಚ್ಚಿಗೆ ಇರುವುದಕ್ಕೆ ಮೂಲ ಕಾರಣ ಎತ್ತಿನ ಕೃಷಿಯೊಂದಿಗೆ ಅತೀ ಹೆಚ್ಚು ಪಶು ಸಂಪತ್ತು ಉಳಿದಿರುವುದಾಗಿದೆ‌. ಹಾಗಾಗಿ, ಬಯಲು ಸೀಮೆಯ ಮಣ್ಣಿನ ಜೀವಂತಿಕೆ ಎತ್ತುಗಳ ಮೇಲೆ ನಿಂತಿದೆ. ಕಳೆದ‌ ಎರಡು ದಶಕಗಳಲ್ಲಿ ಸರ್ಕಾರಗಳು ಯಂತ್ರಗಳಿಗೆ ದೊಡ್ಡ ಪ್ರಮಾಣದ ಪ್ರೋತ್ಸಾಹ‌ ನೀಡಿ ಜೋಡೆತ್ತಿನ ಕೃಷಿಕರಿಗೆ ಯಾವುದೇ ಪ್ರೋತ್ಸಾಹ ನೀಡದೇ ಇರುವುದರಿಂದ ಪ್ರತಿ ಗ್ರಾಮದಲ್ಲಿ 80 ಪ್ರತಿಶತ ಜೋಡೆತ್ತಿನ ಕೃಷಿ ನಾಶವಾಗಿದೆ. ಇದರಿಂದ, ಸಾವಿರಾರು ವರ್ಷಗಳಿಂದ ಸರ್ವರ ಒಳಿತಿಗಾಗಿ ದುಡಿಯುತ್ತಾ ಬಂದಿರುವ ಎತ್ತುಗಳು ಕಾಸಾಯಿಖಾನೆಯ ಪಾಲಾಗುತ್ತಿವೆ. ಇದು ಹೀಗೆಯೇ ಮುಂದುವರೆದರೆ ಸರ್ವರೂ ಕೂಡ ಬೀದಿಗೆ ಬರುವ ಪರಿಸ್ಥಿತಿ‌ ನಿರ್ಮಾಣವಾಗುವುದು. ಇಂದು‌ ನಾವೆಲ್ಲರೂ ಒಗ್ಗೂಡಿ ಪ್ರಜ್ಞಾವಂತಿಕೆಯಿಂದ‌ ಹೆಜ್ಜೆ ಇಡದಿದ್ದರೆ ದೊಡ್ಡ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುವುದು ನಿಶ್ಚಿತವಾಗುತ್ತಿದೆ. ಕೃಷಿಕರು, ಉದ್ದಿಮೆದಾರರು ಹಾಗೂ ರಾಜಕೀಯ ನಾಯಕರು ಪ್ರಜ್ಞಾವಂತಿಕೆಯಿಂದ ಮುಂದೆ ಹೆಜ್ಜೆ ಇಡಬೇಕಾದ ಸಂದರ್ಭ ಇದಾಗಿದೆ...ಯೋಚಿಸಿ!

 ನಂದಿ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡು‌ ಕೃಷಿ, ಉದ್ದಿಮೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವ ಮಾರ್ಗೋಪಾಯದ ಕುರಿತು ಬರೆದಿರುವ  'ಜೈ ನಂದಿ ಜೈ ಜಗತ್' ಪುಸ್ತಕವನ್ನು ಈ ಕೆಳಗಿನ ಲಿಂಕ್ ಮೂಲಕ  ಪಡೆದು ಓದಬಹುದು
https://drive.google.com/file/d/1QQf53JxDRHV0-x6lEFCrHEGRDEeIbPmH/view?usp=drivesdk


 

........................................
ಬಸವರಾಜ ಬಿರಾದಾರ, ನಾಯಕತ್ವ ಸಲಹೆಗಾರ ಹಾಗೂ‌ ನಂದಿ ಕೃಷಿ ತಜ್ಞ, 9449303880 / missionsavesoil.com

Thursday, October 30, 2025

ದಿಕ್ಸೂಚಿ ಇಲ್ಲದ ಹಡಗಿನಲ್ಲಿ ಪಯಣಿಸುತ್ತಿರುವ ಹಿಂದು ವೀರಶೈವ ಲಿಂಗಾಯತದ ರಾಜಕೀಯ ನಾಯಕರು

ದಿಕ್ಸೂಚಿ ಇಲ್ಲದ ಹಡಗು ನಿರ್ದಿಷ್ಟ ಗುರಿ ತಲುಪಲು ಸಾಧ್ಯವಿಲ್ಲ. ಇದೇ ರೀತಿ, ನಿರ್ದಿಷ್ಟ ಗುರಿ ತಲುಪಲು ಸಾಧ್ಯವಿಲ್ಲದ ಹಡಗಿನಲ್ಲಿ ಕುಳಿತು ಪಯಣಿಸುವ ವಾತಾವರಣ ಹಿಂದು ವೀರಶೈವ ಲಿಂಗಾಯತ ರಾಜಕೀಯ ನಾಯಕರಿಗೆ ‌ನಿರ್ಮಾಣವಾಗಿದೆ. ನಿರ್ದಿಷ್ಟ ಗುರಿ ತೋರಿಸುವ ಗುರು ಹಾಗೂ ಗುರಿ ತಲುಪಲು ಸಹಾಯ ಮಾಡುವ 'ನಂದಿ' ಎಂಬ ದಿಕ್ಸೂಚಿಯ ಕೊರತೆ ಹಿಂದು ವೀರಶೈವ ಲಿಂಗಾಯತ ಸಮಾಜಕ್ಕೆ ಉಂಟಾಗಿದೆ. ಸಾವಿರಾರು ವರ್ಷಗಳಿಂದ ಹಿಂದು ವೀರಶೈವ ಲಿಂಗಾಯತರಿಗೆ ನಂದಿಯು ದಿಕ್ಸೂಚಿಯಾಗಿ ಕೆಲಸ ಮಾಡಿ ನಿರ್ದಿಷ್ಟ ಗುರಿಯೆಡೆಗೆ ತಲುಪಿಸುತ್ತಾ ಬಂದಿರುವ ಇತಿಹಾಸವಿದೆ. ಹಿಂದೆ ಯಾವ ಪೂಜ್ಯರು ಹಾಗೂ ರಾಜಕೀಯ ನಾಯಕರು ನಂದಿ‌ ಎಂಬ ದಿಕ್ಸೂಚಿಯನ್ನು ಅವಲಂಬಿಸಿ‌ ಮುನ್ನಡೆಯಲು ಪ್ರಯತ್ನಿಸಿರುವರೋ ಅವರು ಇತಿಹಾಸ ನಿರ್ಮಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಪೂಜ್ಯರ ಸಮಾಧಿಗಳ ಮೇಲೆ ನಂದಿಯನ್ನು ಇಟ್ಟು ಪೂಜಿಸುವ ಸಂಪ್ರದಾಯ ರೂಢಿಯಲ್ಲಿದೆ. ಬೃಹತ್‌ ಗಾತ್ರದ ನಂದಿ ವಿಗ್ರಹಗಳು‌, ನಂದಿ ದೇವಸ್ಥಾನಗಳು ಹಾಗೂ ನಂದಿ ಮೂರ್ತಿ ಹೊಂದಿದ ವಿವಿಧ ಹೆಸರಿನ ಶಿವಾಲಯಗಳನ್ನು ಹಿಂದಿನ ರಾಜರು ನಿರ್ಮಾಣ ಮಾಡಿರುವುದು ನಂದಿ ಶಕ್ತಿಯಿಂದ‌ ಸಾಮ್ರಾಜ್ಯ ನಿರ್ಮಿಸಿರುವುದರ ಸಂಕೇತವಾಗಿವೆ. ಭಾರತ ದೇಶದ ಮಣ್ಣಿನ ಗುಣಲಕ್ಷಣವನ್ನು ಅರಿತು ನಡೆದ ಹಿಂದಿನ ರಾಜರುಗಳಿಗೆ ಯಾವುದೋ ರೂಪದಲ್ಲಿ ನಂದಿಯು ದಿಕ್ಸೂಚಿಯಾಗಿ ನಿರ್ದಿಷ್ಟ ಗುರಿ ತಲುಪಿಸುತ್ತಾ ಬಂದಿದ್ದಾನೆ. ಇಂದು ಹಾಗೂ ಮುಂದೆಯೂ ಕೂಡ ನಂದಿಯು ಸಮಾಜಕ್ಕೆ ದಿಕ್ಸೂಚಿಯಾಗಿ ಕೆಲಸ ಮಾಡಲಿದ್ದಾನೆ ಎಂಬುದು ವೈಜ್ಞಾನಿಕವಾಗಿ ತಿಳಿಯುತ್ತಿದೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಯಾವ ರಾಜಕೀಯ‌ ನಾಯಕರು‌ ನಂದಿಯೆಂಬ ದಿಕ್ಸೂಚಿಯನ್ನು ಅವಲಂಬಿಸಿ ನಡೆಯಲು ಪ್ರಯತ್ನಿಸುವರೋ ಅವರು ಮಾತ್ರ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ಇತಿಹಾಸ ಹಾಗೂ ಇಂದಿನ ಜಾಗತಿಕ ವಿದ್ಯಮಾನಗಳು ಸ್ಪಷ್ಟವಾಗಿ ತಿಳಿಸುತ್ತಿವೆ. 

ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಆಶಿರ್ವಾದದಿಂದ ನಂದಿ ಕೃಷಿ ಪುನರುಜ್ಜೀವನಕ್ಕಾಗಿ  'ನಂದಿ ಕೂಗು' ಅಭಿಯಾನವು ಎರಡು ವರ್ಷಗಳ ಹಿಂದೆ ಪ್ರಾರಂಭವಾಗಿದೆ. ಅಭಿಯಾನದ ಮೂಲಕ ಜನಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ. ಕಳೆದ‌ ವರ್ಷದ ಗೌರಿ ಹುಣ್ಣಿಮೆಯ ದಿನದಂದು ವಿಜಯಪುರದ ಜ್ಞಾನಯೋಗಾಶ್ರಮದಿಂದ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಜನ್ಮ ಸ್ಥಳವಾದ ಬಿಜ್ಜರಗಿ ಗ್ರಾಮದ ವರೆಗೆ ನಂದಿ ಕೃಷಿಕರ ಒಳಿತಿನ ಉದ್ದೇಶದಿಂದ ಎತ್ತಿನ ಬಂಡಿಗಳೊಂದಿಗೆ ಪಾದಯಾತ್ರೆ ಮಾಡಲಾಯಿತು. ಶ್ರೀ ಸಿದ್ಧೇಶ್ವರ ಶ್ರೀಗಳು 14 ವರ್ಷ ತಮ್ಮ ಬಾಲ್ಯ ಜೀವನವನ್ನು ಕಳೆದ ಬಿಜ್ಜರಗಿಯ ಅವರ ಪೂರ್ವಾಶ್ರಮ‌ ಮನೆಯಲ್ಲಿ‌ ಕರಭಂಟನಾಳದ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಐತಿಹಾಸಿಕವಾದ ಸಂಕಲ್ಪ‌ ಕಾರ್ಯಕ್ರಮ ಜರುಗಿತು. "ಮುಂದಿನ 10 ವರ್ಷಗಳಲ್ಲಿ 10 ಪಟ್ಟು ನಂದಿ ಸಂಪತ್ತು ಹೆಚ್ಚಿಸುವ ಸಂಕಲ್ಪ" ಮಾಡಲಾಯಿತು. ಸಂಕಲ್ಪ ವಿಧಿಯನ್ನು ಅಂತರಾಷ್ಟ್ರೀಯ ಕೃಷಿ ವಿಜ್ಞಾನಿಗಳಾದ ಡಾ. ಚಂದ್ರಶೇಖರ ‌ಬಿರಾದಾರ ಅವರು ಜನರಿಗೆ ಬೋಧಿಸಿದರು. ಶ್ರೀ ಸಿದ್ಧೇಶ್ವರ ಶ್ರೀಗಳ ಸಹೋದರರಾದ ಶ್ರೀ ಸೋಮಲಿಂಗ ಅಜ್ಜನವರು, ಶ್ರೀ ಅಮರೇಶ ಅಜ್ಜನವರು, ಪಾದಯಾತ್ರೆಗೈದ ಯುವ ನಾಯಕರಾದ ಶ್ರೀ ಉಮೇಶ ವಂದಾಲ, ಸಿರಿಧಾನ್ಯ ಹೊಟೇಲ್ ಉದ್ದಿಮೆದಾರರಾದ ಶ್ರೀ ಮಲ್ಲಿಕಾರ್ಜುನ ಹಟ್ಟಿ ಹಾಗೂ ಇತರರು ಸಂಕಲ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುಂದಿನ 10 ವರ್ಷಗಳಲ್ಲಿ 10 ಪಟ್ಟು ನಂದಿ ಸಂಪತ್ತನ್ನು ಹೆಚ್ಚಿಸುವ ಸಂಕಲ್ಪವನ್ನು ಸಮಾಜದ ಗುರಿಯನ್ನಾಗಿಸಿ ಒಗ್ಗೂಡಿ ಮುಂದೆ‌ ನಡೆದರೆ ಮುಂದೆ ಸಮಾಜಕ್ಕೆ ಆಗಬಹುದಾದ ಒಳಿತುಗಳೇನು? ಅಥವಾ ನಂದಿ ಸಂಪತ್ತು ನಾಶವಾಗುತ್ತಲೇ‌ ಸಾಗಿದರೆ ಮುಂದೆ ಸಮಾಜಕ್ಕೆ ಎದುರಾಗಬಹುದಾದ ಸಮಸ್ಯೆಗಳೇನು? ಎಂಬುದರ ಕುರಿತು ಇಂದಿನ ರಾಜಕೀಯ ನಾಯಕರು ಒಮ್ಮೆ ಯೋಚಿಸಿ ಮುಂದೆ ಹೆಜ್ಜೆ‌ ಇಡಬೇಕಾದ ಸಂದರ್ಭ ಬಂದೊದಗಿದೆ.

ನಂದಿ ಶಕ್ತಿಯ‌ ಮಹತ್ವ ಅರಿತು ನಡೆಯುವವರನ್ನು ಮಾತ್ರ ಹಿಂದುಗಳು ಅಥವಾ ವೀರಶೈವರು ಅಥವಾ ಲಿಂಗಾಯತರು ಎಂದು ಗುರುತಿಸುವ ಕಾಲ ಬರುವುದು ಬಹಳ ದೂರ ಉಳಿದಿಲ್ಲ.  ಏಕೆಂದರೆ, ಯಾವುದೇ ವಸ್ತುವಿನ ಬೆಲೆ ಅದನ್ನು ಕಳೆದುಕೊಂಡಾಗ ಮಾತ್ರ ತಿಳಿಯುವುದು. ಈ ಸತ್ಯದ ಪರಿಚಯವನ್ನು ಮಾಡುವ ಉದ್ದೇಶದಿಂದ ಜೈ ನಂದಿ ಜೈ ಜಗತ್' ಎಂಬ ಪುಸ್ತಕವನ್ನು ಬರೆಯಲಾಗಿದೆ. ಪುಸ್ತಕವನ್ನು ಈ ಕೆಳಗಿನ ಲಿಂಕ್ ಮೂಲಕ ಪಡೆದು ಓದಬಹುದು.

https://drive.google.com/file/d/1UOdD0r1yZti0mPtimCSx2Yb5BSNczLhV/view?usp=sharing 


 ...............................................
ಬಸವರಾಜ ಬಿರಾದಾರ
ನಾಯಕತ್ವ ಸಲಹೆಗಾರ ಹಾಗೂ ನಂದಿ ಕೃಷಿ ತಜ್ಞ, 9449303880 / missionsavesoil.com

ಗುರು ವಿರಕ್ತ ಮಠಗಳ ಪೂಜ್ಯರು ಹಾಗೂ ಭಕ್ತರ ನಂದಿ ಮತ ಜಾಗೃತಿಯ ಮೇಲೆ ವಿಶ್ವದ ಭವಿಷ್ಯ ನಿಂತಿದೆಯೇ?

  ಇಂದಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ ಸಂಪೂರ್ಣವಾಗಿ ಭಾರತದಲ್ಲಿ ಸ್ಥಗಿತವಾದರೆ ಯಾವ ಗ್ರಾಮಗಳಲ್ಲಿ ನಂದಿ ಅಥವಾ ಜೋಡೆತ್ತಿನ ಕೃಷಿಕರು ಹೆಚ್ಚಿಗೆ ಇರುವರೋ ಆ ಗ್ರಾಮ...