ಸೈದ್ಧಾಂತಿಕವಾಗಿ ಒಬ್ಬ ಗುರು ತತ್ವಗಳನ್ನು ಪ್ರತಿಪಾದಿಸಿ ತತ್ವಜ್ಞಾನಿ ಆಗಬಹುದು, ಗುರುವೇ ತತ್ವವಾಗಿ ಉಳಿಯಲು ಖಂಡಿತ ಸಾಧ್ಯವಿಲ್ಲ. ಹಾಗಾಗಿ, ಬಸವಣ್ಣನವರು ವಿಶ್ವಕ್ಕೆ ಅನ್ವಯವಾಗುವ ನಾಲ್ಕು ಕಾಲಿನ ಜೀವಂತ ಬಸವಣ್ಣ ಅಥವಾ ಎತ್ತುಗಳ ಆಧಾರಿತ 'ಬಸವ ತತ್ವ' ಪ್ರತಿಪಾದಿಸಿ ವಿಶ್ವಗುರು ಆಗಿರುವರು. ನಂದಿ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡು ಪಂಚಮಹಾಭೂತಗಳು ಹಾಗೂ ಗ್ರಾಮೀಣ ಉದ್ಯೋಗಗಳನ್ನು ಸದಾ ರಕ್ಷಿಸಿಕೊಳ್ಳುವ ವಿಜ್ಞಾನಕ್ಕೆ 'ಬಸವ ತತ್ವ' ಎನ್ನುತ್ತಾರೆ. ಹಾಗಾಗಿ ಎತ್ತಿನ ರೈತರಿಂದ 'ಬಸವ ತತ್ವ' ಉಳಿಯಲು ಸಾಧ್ಯ ಎಂಬುದು ಸೈದ್ದಾಂತಿಕವಾಗಿ ತಿಳಿಯುತ್ತಿದೆ. ಬಸವಣ್ಣನವರು ಪ್ರತಿಪಾದಿಸಿದ ಬಸವ ತತ್ವವನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಂಡು ಅನುಷ್ಠಾನಕ್ಕೆ ತಂದರೆ ಮಾತ್ರ ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಬಸವ ಸಂಸ್ಕೃತಿ ಅಭಿಯಾನದ ಕರಪತ್ರದಲ್ಲಿ ವ್ಯಕ್ತಪಡಿಸಿದ ಆಶಯಗಳು ಜೋಡೆತ್ತಿನ ಕೃಷಿ ಉಳಿದು ಬೆಳೆಯುತ್ತಿರುವ ಗ್ರಾಮಗಳಲ್ಲಿ ಇಡೇರುತ್ತಿವೆ ಹಾಗೂ ಜೋಡೆತ್ತಿನ ಕೃಷಿ ಸಂಪೂರ್ಣವಾಗಿ ನಾಶವಾದ ಗ್ರಾಮಗಳಲ್ಲಿ ಬಸವ ತತ್ವದ ಆಶಯಗಳನ್ನು ಇಡೇರಿಸುವುದು ಸಾಧ್ಯವಿಲ್ಲ ಎಂಬುದನ್ನು ವೈಜ್ಞಾನಿಕವಾಗಿ ನಿರೂಪಿಸಿ ತೋರಿಸಲು ಜ್ಞಾನಯೋಗಿ ಪೂಜ್ಯ ಶ್ರಿ ಸಿದ್ಧೇಶ್ವರ ಸ್ವಾಮೀಜಿಯವರ ಆಶಿರ್ವಾದದಿಂದ ಪ್ರಾರಂಭವಾದ 'ನಂದಿ ಕೂಗು' ಅಭಿಯಾನದ ಸ್ವಯಂ ಸೇವಕರು ಸಿದ್ಧರಾಗಿದ್ದಾರೆ. ಬಸವ ಸಂಸ್ಕೃತಿ ಅಭಿಯಾನದ ಆಶಯಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿರುವ ದಾಖಲೆ ಹಾಗೂ ನಂದಿ ಕೃಷಿ ಆಧಾರಿತ ಬಸವ ತತ್ವದ ಕುರಿತು ಬರೆದ 'ನಂದಿ ಕೂಗು' ಪುಸ್ತಕವನ್ನು ಈ ಲಿಂಕ್ ಮೂಲಕ ಪಡೆಯಬಹುದು. https://drive.google.com/drive/folders/1RNCje0oGn6i5AmL1TEqIPJuCMByF9Vso
ಕಳೆದ ಕೆಲವು ದಶಕಗಳಲ್ಲಿ ನಾಲ್ಕು ಕಾಲಿನ ಬಸವಣ್ಣಗಳ ಆಧಾರಿತ ಬಸವ ತತ್ವಕ್ಕೆ ವಿರುದ್ಧವಾದ ತೈಲ ತತ್ವಕ್ಕೆ ಪ್ರೋತ್ಸಾಹ ದೊರೆಯುತ್ತಾ ಬಂದ ಕಾರಣ ನಂದಿ ಕೃಷಿ ನಾಶವಾಗಿ ಕೃಷಿ ಸಂಸ್ಕೃತಿ ಅಳಿವಿನ ಅಂಚಿಗೆ ಬಂದು ತಲುಪಿದೆ. ಇಂತಹ ಸಂದರ್ಭದಲ್ಲಿ, ನಂದಿ ಕೃಷಿ ಆಧಾರಿತ ವಿವಿಧ ಆಚರಣೆಗಳ ಮೂಲಕ ಕೃಷಿ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸುತ್ತಿರುವ ರೈತರು ಹಾಗೂ ಅವರ ಆಚರಣೆಗಳನ್ನು ಪೋಷಿಸಲು ಪ್ರಯತ್ನಿಸುತ್ತಿರುವ ಪೂಜ್ಯರನ್ನು ಅವೈಜ್ಞಾನಿಕ ವಿಚಾರಗಳಿಂದ ದಾರಿ ತಪ್ಪಿಸುತ್ತಿರುವ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾದ ಡಾ ಎಸ್ ಎಮ್ ಜಾಮದಾರ್ ಅವರ ನಡೆಯನ್ನು ಪ್ರಶ್ನಿಸುವುದು ಅನಿವಾರ್ಯವಾಗಿದೆ. ಬಸವ ಸಂಸ್ಕೃತಿ ಅಭಿಯಾನದ ಸಂದರ್ಭದಲ್ಲಿ ನಂದಿ ಕೂಗು ಅಭಿಯಾನದ ವತಿಯಿಂದ ಎತ್ತುಗಳ ಆಧಾರಿತ ಬಸವ ತತ್ವದ ಕುರಿತು ಜನಜಾಗೃತಿ ಮೂಡಿಸಲು ವಿಜಯಪುರದಿಂದ ಬೆಂಗಳೂರು ವರೆಗೆ 560 ಕಿಲೋಮೀಟರ್ ಪಾದಯಾತ್ರೆ ಮಾಡಲಾಗಿದೆ.( missionsavesoil.com ) ನಂತರ, ಡಾ ಎಸ್ ಎಮ್ ಜಾಮದಾರ್ ಅವರು ಪ್ರತಿಪಾದಿಸುತ್ತಿರುವ ಅವೈಜ್ಞಾನಿಕ ವಿಚಾರವನ್ನು ಪ್ರಶ್ನಿಸಿ ಸೆಪ್ಟೆಂಬರ್ 19 ರಂದು ಪತ್ರ ಬರೆಯಲಾಗಿದೆ. ಆದರೆ, ಇಲ್ಲಿಯವರೆಗೆ ಉತ್ತರ ನೀಡಿರುವುದಿಲ್ಲ. ಡಾ ಎಸ್ ಎಮ್ ಜಾಮದಾರ್ ಅವರು ಎತ್ತುಗಳ ಪೂಜೆ ಮಾಡುವವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವ ಕುರಿತು ಮಾತನಾಡಿರುವ ವಿಡಿಯೋ, ಅವರ ಅವೈಜ್ಞಾನಿಕ ನಡೆ ಪ್ರಶ್ನಿಸಿ ಬರೆದ ಪತ್ರ ಹಾಗೂ ಪತ್ರಕ್ಕೆ ಬೆಂಬಲ ನೀಡುವ ವಿವಿಧ ದಾಖಲಾತಿಗಳನ್ನು ಈ ಲಿಂಕ್ ಮೂಲಕ ಪಡೆಯಬಹುದು. https://drive.google.com/drive/u/0/mobile/folders/1JbNaoCiDmcRRkJ1zF3hSsXLaR2wqImmA?usp=sharing
ಜೋಡೆತ್ತಿನ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ, ನಂದಿ ಆರೋಗ್ಯ ವರ್ಧಕಗಳ ತಯಾರಿಕೆ, ನಂದಿ ಬಯೋಗ್ಯಾಸ್ ಉತ್ಪಾದನೆ ಹಾಗೂ ನಂದಿ ವಿದ್ಯುತ್ ತಯಾರಿಕೆಗೆ ಪ್ರೋತ್ಸಾಹ ನೀಡಿ ಮುಂದಿನ ಹತ್ತು ವರ್ಷಗಳಲ್ಲಿ ಗ್ರಾಮಗಳನ್ನು ಸಂಪೂರ್ಣ ಸ್ವಾವಲಂಬಿ ಗಳನ್ನಾಗಿಸಬಹುದಾದ ನಂದಿ ಗ್ರಾಮ ಸ್ವರಾಜ್ಯ ಎಂಬ ಯೋಜನೆಯನ್ನು ರೂಪಿಸಲಾಗಿದೆ. ನಂದಿ ಗ್ರಾಮ ಸ್ವರಾಜ್ಯ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೆ ತಂದರೆ ಬಸವ ತತ್ವ ಪುನರುಜ್ಜೀವನ ಗೊಳಿಸಲು ಸಾಧ್ಯ ಎಂಬುದನ್ನು ನಿರೂಪಿಸಿ ತೋರಿಸಲಾಗುವುದು. ಕೃಷಿಕರು, ಜಂಗಮ, ಬಡಿಗೇರ, ಕುಂಬಾರ, ಕಂಬಾರ, ಚಮ್ಮಾರ ಹಾಗೂ ಇತರ ಸಮುದಾಯಗಳಿಗೆ ಉದ್ಯೋಗದ ಭದ್ರತೆ ನೀಡುವ ಬಸವ ತತ್ವದ ಪ್ರತಿಪಾದನೆಯನ್ನು ನಂದಿ ಕೂಗು ಅಭಿಯಾನ ಮಾಡುತ್ತಿದೆ. ಡಾ ಎಸ್ ಎಮ್ ಜಾಮದಾರ್ ಅವರು ಪ್ರತಿಪಾದಿಸುತ್ತಿರುವ ಬಸವ ತತ್ವ ಅನುಷ್ಠಾನದಿಂದ ಹಾಗೂ ಲಿಂಗಾಯತ ಸಮಾಜದವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ತಂದು ಕೊಡುವುದರಿಂದ ಮುಂದಿನ 10 ವರ್ಷಗಳಲ್ಲಿ ಗ್ರಾಮಗಳಲ್ಲಿ ಉಂಟಾಗಬಹುದಾದ ವೈಜ್ಞಾನಿಕ ಬದಲಾವಣೆಗಳೇನು? ಎಂಬುದರ ಕುರಿತು ಸ್ಪಷ್ಟ ಯೋಜನೆಯನ್ನು ಸಮಾಜಕ್ಕೆ ಪ್ರಸ್ತುತಪಡಿಸಲು ಆಗ್ರಹಿಸುತ್ತೇವೆ. ಬಸವ ತತ್ವ ಪುನರುಜ್ಜೀವನಕ್ಕಾಗಿ ರೂಪಿಸಿದ ನಂದಿ ಗ್ರಾಮ ಸ್ವರಾಜ್ಯ ಯೋಜನೆಯ ಕರಪತ್ರವನ್ನು ಈ ಲಿಂಕ್ ಮೂಲಕ ಪಡೆಯಬಹುದು. https://drive.google.com/drive/folders/1rktTs9iGSlgNHXMzgo0YLajLZsWraHyP
ಬಸವರಾಜ ಬಿರಾದಾರ,
ನಾಯಕತ್ವ ಸಲಹೆಗಾರ ಹಾಗೂ ನಂದಿ ಕೃಷಿ ತಜ್ಞ, 9449303880 / missionsavesoil.com
AI ಪ್ರಸ್ತುತಪಡಿಸಿದ ಲೇಖನದ ಸಾರಾಂಶದ ವೀಡಿಯೋ
No comments:
Post a Comment