Friday, October 24, 2025

ಜೈ ನಂದಿ, ಜೈ ಹಿಂದು, ಜೈ ಭಾರತ

 

ನಂದಿಗೆ ಜಯವಾದರೆ ಹಿಂದುಗಳಿಗೆ ಜಯವಾಗುವುದು, ಹಿಂದುಗಳಿಗೆ ಜಯವಾದರೆ ಭಾರತ ದೇಶದ ಎಲ್ಲ ಮತಗಳ ಜನರಿಗೆ ಜಯವಾಗುವುದು ಎಂಬ ಸತ್ಯದ ದರ್ಶನ ಇತಿಹಾಸದ ಪುಟಗಳಿಂದ ಆಗುತ್ತದೆ. ಸಿಂಧೂ‌ ನಂದಿಯಿಂದ ಹಿಂದೂ ಮಹಾಸಾಗರದ ವರೆಗೆ ಇರುವ ಭೂ ಪ್ರದೇಶವು ಹಿಂದು ರಾಷ್ಟ್ರವಾಗಿದೆ. ಈ ಭೌಗೋಳಿಕ ಪ್ರದೇಶವು ಜಗತ್ತಿನಲ್ಲಿ ಅತೀ ಹೆಚ್ಚು ವೈವಿಧ್ಯತೆಯಿಂದ ಕೂಡಿದ ನಂದಿ ಸಂಪತ್ತನ್ನು ಹೊಂದಿದೆ. ನಂದಿ ಸಂಪತ್ತಿನ ಮೇಲೆ‌ ನಮ್ಮ ನಾಗರೀಕತೆಯ ಭವಿಷ್ಯ ನಿಂತಿದೆ ಎಂಬುದನ್ನು ಅರಿತು ಬದುಕುವವರೆಲ್ಲ‌ ನಿಜವಾದ ಹಿಂದುಗಳಾಗಿದ್ದಾರೆ. ಇದೇ ಕಾರಣಕ್ಕೆ ಹಿಂದುಗಳ ಬಹುತೇಕ ಧಾರ್ಮಿಕ‌ ಆಚರಣೆಗಳು ನಂದಿ ಕೇಂದ್ರಿತವಾಗಿವೆ. ಹಿಂದುಗಳು ವಾಸಿಸುವ ಭೂ ಪ್ರದೇಶವು ಜಗತ್ತಿನ ಅತೀ ಹೆಚ್ಚು ಶಿವಾಲಯಗಳನ್ನು ಹೊಂದಿದೆ.  ಪ್ರತಿಯೊಂದು ಶಿವಾಲಯದ ಶಿವಲಿಂಗದ ಮುಂದಿರುವ ನಂದಿಯು "ನಾರೀಕತೆಯ ಭವಿಷ್ಯ ನಂದಿ ಸಂಪತ್ತಿನ ಮೇಲೆ ನಿಂತಿದೆ ಎಂಬುದರ ಸೂಚಕವಾಗಿದೆ". 

ಭಾರತ ದೇಶದಲ್ಲಿರುವ 12 ಜ್ಯೋತಿರ್ಲಿಂಗಗಳು ಹಿಂದುಗಳನ್ನು ವಿವಿಧ ಆಯಾಮಗಳಲ್ಲಿ ಒಗ್ಗೂಡಿಸಿ ಇಡುವ ಶಕ್ತಿ ಕೇಂದ್ರಗಳಾಗಿವೆ. ಜಗತ್ತಿನ ಇತಿಹಾಸದಲ್ಲಿ ಹಿಂದೂ ರಾಷ್ಟ್ರ ಅತೀ ಹೆಚ್ಚು ಬಾರಿ ವಿದೇಶಿಗರ ದಬ್ಬಾಳಿಕೆಗೆ ಒಳಗಾದರೂ ಕೂಡ ಹಿಂದುಗಳು ತಲೆ ಎತ್ತಿ ನಿಲ್ಲುವಂತೆ ಮಾಡಿರುವ ನಿಗೂಢ ಶಕ್ತಿಯೇ ನಂದಿಯಾಗಿದೆ. ವಿದೇಶಿಗರ‌ ಆಕ್ರಮಣದ ಸಂದರ್ಭದಲ್ಲಿ ಬಹು ಜನರು ನಂದಿ ಶಕ್ತಿಯನ್ನು ಅವಲಂಬಿಸಿ ಒಂದಾಗಿ ಸಮಸ್ಯೆಗೆ ಪರಿಹಾರ ಕಂಡುಕೊಂಡ ಸಾಕಷ್ಟು ಉದಾಹರಣೆಗಳಿವೆ. ಹಾಗಾಗಿ, ಹಿಂದೂ ರಾಷ್ಟ್ರದಲ್ಲಿ ಕಾಣ ಸಿಗುವ ನಂದಿ ಹಾಗೂ ಬಸವೇಶ್ವರ ದೇವಸ್ಥಾನಗಳು ಹಿಂದುಗಳ ಭಾವೈಕ್ಯತೆಯ ಸಂಕೇತವಾಗಿವೆ. 

'ಒಕ್ಕೂಟ ಹಾಗೂ ಇದರ ಪ್ರದೇಶಗಳು'  ಎಂಬ ಶಿರ್ಷಿಕೆಯಿಂದ ಪ್ರಾರಂಭವಾಗುವ ಭಾರತದ ಸಂವಿಧಾನದ ಮೊದಲ ಭಾಗವು ಸಿಂಧೂ ನದಿಯ ನಂದಿ ಮುದ್ರೆಯಿಂದ ಅಲಂಕೃತ ಗೊಂಡಿದೆ. ಭಾರತ ದೇಶದ ಜನರನ್ನು ಹಿಂದಿನಿಂದ ಒಗ್ಗೂಡಿಸಿ ಬೆಳೆಸಿರುವ ಮೂಲ ಶಕ್ತಿ ನಂದಿಯಾಗಿದೆ ಎಂಬುದನ್ನು ಸಂವಿಧಾನವೂ ಕೂಡ ತಿಳಿಸುತ್ತಿದೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಹಲವು ಕಾರಣಗಳಿಂದ ವಿಘಟನೆ ಆಗುತ್ತಿರುವುದನ್ನು ತಡೆಯುವ ಏಕೈಕ ಶಕ್ತಿ‌ ನಂದಿಯಾಗಿದೆ. ಪೂಜ್ಯರು ಹಾಗೂ ನಂದಿ ಕೃಷಿಕರ ಶಕ್ತಿಯನ್ನು ಸದ್ಭಳಕೆ ಮಾಡಿಕೊಂಡ ರಾಜರ ಹೆಸರುಗಳು ಮಾತ್ರ ಇತಿಹಾಸದಲ್ಲಿ ಅಚ್ಚು ಅಳಿಯದಂತೆ ಉಳಿದಿರುವುದನ್ನು ಇಂದಿನ ರಾಜಕೀಯ ನಾಯಕರು ಮಾದರಿಯಾಗಿ ಸ್ವೀಕರಿಸಬೇಕಾಗಿದೆ. 

ಕಳೆದ ಕೆಲವು ದಶಕಗಳಿಂದ ನಂದಿ ಶಕ್ತಿಗೆ ವಿರುದ್ಧವಾದ ತೈಲ ಶಕ್ತಿಗೆ ಹೆಚ್ಚು ಪ್ರೋತ್ಸಾಹ ದೊರೆತ ಕಾರಣ ನಂದಿ ಸಂಪತ್ತು ನಾಶವಾಗಿ ಪ್ರಕೃತಿ ವಿನಾಶದ ಅಂಚಿಗೆ ಬಂದು ತಲುಪಿದೆ. ಕರ್ನಾಟಕ ರಾಜ್ಯದ ಪ್ರಮುಖ 12 ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಿಲ್ಲದ ಸ್ಥಿತಿ ತಲುಪಿರುವುದಕ್ಕೆ ಮೂಲ ಕಾರಣ ನಂದಿ ಕೃಷಿ ನಾಶವಾಗಿ ಯಂತ್ರ ಹಾಗೂ ರಾಸಾಯನಿಕಗಳ ಬಳಕೆ ಹೆಚ್ಚಾಗಿರುವುದಾಗಿದೆ. ಭಾರತ ದೇಶದಲ್ಲಿ ಗುರು-ಶಿಷ್ಯ ಪರಂಪರೆಯ ಕೊಂಡಿಯಾಗಿ ಕೆಲಸ ಮಾಡುತ್ತಾ ಬಂದಿರುವ ನಂದಿ ಸಂಪತ್ತು ನಾಶವಾದಂತೆ ಮಠ ಮಾನ್ಯಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳಲು ಪ್ರಾರಂಭಿಸಿರುವವು. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ರಾಜಕೀಯ ನಾಯಕರು ಎಲ್ಲಿಯವರೆಗೆ ಹಿಂದುಗಳನ್ನು ನಂದಿ ಶಕ್ತಿ ಆಧಾರಿತವಾಗಿ ಒಂದುಗೂಡಿಸಿ ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಿಲ್ಲವೋ ಅಲ್ಲಿಯವರೆಗೆ ಒಳ್ಳೆಯ ಭವಿಷ್ಯ ತೆರೆದುಕೊಳ್ಳಲು ಸಾಧ್ಯವಿಲ್ಲ.

ಭಾರತ ದೇಶದಲ್ಲಿರುವ ಇತರ ಮತಗಳ ರಾಜಕೀಯ‌ ನಾಯಕರು ಹಾಗೂ ಜನರಿಗೂ ಕೂಡ ಒಳ್ಳೆಯ ಭವಿಷ್ಯ ಸೃಷ್ಟಿಯಾಗಲು ಸಾಧ್ಯವಿಲ್ಲ. ಹಾಗಾಗಿ, ನಾಡಿನ ಪೂಜ್ಯರು ಹಾಗೂ ರಾಜಕೀಯ  ನಾಯಕರು ವಾಸ್ತವಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುಂದೆ ಹೆಜ್ಜೆ‌ ಇಡಬೇಕಾಗಿದೆ. ಸ್ವತಂತ್ರ ಸಂಗ್ರಾಮದ ಸಂದರ್ಭದಲ್ಲಿ ಶಿವನ ಗಣವಾದ ಗಣೇಶನೆಂಬ ಶಕ್ತಿಯಿಂದ ಜನರನ್ನು ಹೇಗೆ ಒಂದು ಗೂಡಿಸಲಾಯಿತೋ, ಅದೇ ರೀತಿ ಶಿವನ ಇನ್ನೊಂದು ಗಣವಾದ ನಂದೀಶನ ಶಕ್ತಿಯಿಂದ ರಾಷ್ಟ್ರದ ಬಹು ಜನರನ್ನು ಒಂದು ಗೂಡಿಸಬೇಕಾಗಿದೆ. ನಂದಿಯಿಂದ ಹಿಂದುಗಳೆಲ್ಲ ಒಂದು ಹಾಗೂ ಭಾರತೀಯರೆಲ್ಲ ಒಂದು ಎಂಬ ಭಾವ ಜನ್ಮ ತಾಳುವಂತೆ ಮಾಡುವ ಅವಶ್ಯಕತೆ ಬಂದೊದಗಿದೆ. ನಂದಿ ಆಧಾರಿತ ರೈತ ರಾಜಕೀಯದ ಮೂಲಕ ಗ್ರಾಮಗಳನ್ನು ಸ್ವಾವಲಂಬಿ ಗಳನ್ನಾಗಿಸುವ ವಿಶೇಷ ಯೋಜನೆಯನ್ನು ನಂದಿ ಕೂಗು ಅಭಿಯಾನ ಪರಿಚಯಿಸುತ್ತಿದೆ.

 ನಂದಿ ಆಧಾರಿತ ರೈತ ರಾಜಕೀಯ  

ನಂದಿ ಶಕ್ತಿಯಿಂದ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿಸುವ ಸಾಧ್ಯತೆ

  1. ಜೋಡೆತ್ತಿನ ಕೃಷಿಕರ ಶ್ರಮ ಹಾಗೂ ಕೊಡುಗೆಯನ್ನು ಗುರುತಿಸಿ ಪ್ರತಿ ತಿಂಗಳು ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತರುವುದು
  2. ಜೋಡೆತ್ತಿನ ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಹಾಗೂ ಅನುಷ್ಠಾನಕ್ಕೆ ಪ್ರೋತ್ಸಾಹ. 
  3. ನಂದಿ ಉತ್ಪನ್ನ ಆಧಾರಿತ ಆರೋಗ್ಯ ವರ್ಧಕಗಳ ತಯಾರಿಕೆ ಹಾಗೂ ಮಾರಾಟಕ್ಕೆ ಪ್ರೋತ್ಸಾಹ.
  4. ಬಯೋಗ್ಯಾಸ್ ತಯಾರಿಸಿ ಸಿಲಿಂಡರ್ ಮೂಲಕ ವಿತರಿಸುವ ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಹಾಗೂ ಅನುಷ್ಠಾನಕ್ಕೆ  ಪ್ರೋತ್ಸಾಹ.
  5. ನಂದಿ ಶ್ರಮದಿಂದ ವಿದ್ಯುತ್ ತಯಾರಿಕೆ ಹಾಗೂ ವಿತರಣೆಗೆ ಪ್ರೋತ್ಸಾಹ.
  6. ನಂದಿ ಗ್ರಾಮ ಸ್ವರಾಜ್ಯ ಯೋಜನೆ ಅನುಷ್ಠಾನದಲ್ಲಿ ಭಾಗಿಯಾಗಲು ಖಾಸಗಿ ಹೂಡಿಕೆದಾರರನ್ನು ಆಹ್ವಾನಿಸುವುದು.

‘ನಂದಿ ಗ್ರಾಮ ಸ್ವರಾಜ್ಯ ಯೋಜನೆ’ ಜಾರಿಗಾಗಿ ರೈತರು, ಆಧ್ಯಾತ್ಮಿಕ ನಾಯಕರು ಹಾಗೂ ವಿಜ್ಞಾನಿಗಳ ಸಂಗಮ

  1. ರೈತರ ಪಾತ್ರ: ನಂದಿಗಾಗಿ ಪಕ್ಷಾತೀತವಾಗಿ ಮತ ಮೀಸಲಿಡಲು ಭಕ್ತರಿಗೆ ಅರಿವು ಮೂಡಿಸಲು ಆಧ್ಯಾತ್ಮಿಕ ನಾಯಕರಿಗೆ ಕೋರುವುದು.
  2. ಆಧ್ಯಾತ್ಮಿಕ ನಾಯಕರ ಪಾತ್ರ: ನಂದಿ ಶಕ್ತಿ ಬಳಕೆಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುವ ನಾಯಕರಿಗಾಗಿ ಪಕ್ಷಾತೀತವಾಗಿ ಮತ ಮೀಸಲಿಡಲು ಜನರಿಗೆ ಅರಿವು ಮೂಡಿಸುವುದು ಹಾಗೂ ನಂದಿ ಮತಗಳನ್ನು ಕ್ರೊಢೀಕರಿಸುವುದು.
  3. ವಿಜ್ಞಾನಿಗಳ ಪಾತ್ರ: ನಂದಿ ಶಕ್ತಿ ಬಳಕೆಯಿಂದ ಸುಭದ್ರ ರಾಷ್ಟç ನಿರ್ಮಿಸಬಹುದಾದ ವೈಜ್ಞಾನಿಕ ವಿಚಾರಗಳನ್ನು ಹಂಚಿಕೊಳ್ಳುವುದು.

-ವೈಜ್ಞಾನಿಕ ಹಿನ್ನೆಲೆ-

“ಬೇರುಗಳು ನಾಶವಾದರೆ ಮರ ಸದೃಢವಾಗಿ ಉಳಿಯಲು ಹೇಗೆ ಸಾಧ್ಯವಿಲ್ಲವೋ, ಅದೇ ರೀತಿ ಭಾರತ ರಾಷ್ಟçದ ಮೂಲ ಬೇರುಗಳಾದ ನಂದಿ ಕೃಷಿಕರು ಉಳಿಯದಿದ್ದರೆ ರಾಷ್ಟçವು ಸದೃಢವಾಗಿ ಉಳಿಯಲು ಸಾಧ್ಯವಿಲ್ಲ” ಎಂಬುದನ್ನು ಇಂದಿನ ವಾಸ್ತವಿಕ ಸಮಸ್ಯೆಗಳು ತಿಳಿಸುತ್ತಿವೆ. ನಂದಿ ಕೃಷಿಕರಿಗೆ ಪೂರಕ ವ್ಯವಸ್ಥೆ ನಿರ್ಮಾಣವಾದ ಸಂದರ್ಭಗಳಲ್ಲಿ ಭಾರತವು ಜಗತ್ತಿನಲ್ಲಿ ಶ್ರೀಮಂತ ರಾಷ್ಟçವಾಗಿತ್ತು ಎಂಬುದು ಇತಿಹಾಸದಿಂದ ತಿಳಿಯುತ್ತದೆ. ತೈಲ ಶಕ್ತಿ ಆಧಾರಿತ ಯಂತ್ರಗಳು ಹಾಗೂ ರಾಸಾಯನಿಕಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿ ನಂದಿ ಕೃಷಿಕರಿಗೆ ಯಾವುದೇ ಪ್ರೋತ್ಸಾಹ ನೀಡದೇ ಇರುವ ಕಾರಣ ಕಳೆದ ೨೦ ವರ್ಷಗಳಲ್ಲಿ ೮೦ ಪ್ರತಿಶತ ನಂದಿ ಕೃಷಿ ನಾಶವಾಗಿದೆ. ಇದರ ದುಷ್ಪರಿಣಾಮವು ಮಣ್ಣು ಹಾಗೂ ಮಣ್ಣನ್ನು ಅವಲಂಬಿಸಿದ ಮಾನವರು ಅನಾರೋಗ್ಯಕ್ಕೆ ತುತ್ತಾಗುವ ಮೂಲಕ ವ್ಯಕ್ತವಾಗುತ್ತಿದೆ. ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಕೆಲವು ಗ್ರಾಮಗಳಲ್ಲಿ ನಾಲ್ಕು ಜನರಲ್ಲಿ ಒಬ್ಬರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವುದಕ್ಕೆ ಮೂಲ ಕಾರಣ ನಂದಿ ಕೃಷಿ ಸಂಪೂರ್ಣವಾಗಿ ನಾಶವಾಗಿರುವುದಾಗಿದೆ. ಒಂದು ಸಾವಿರಕ್ಕಿಂತ ಹೆಚ್ಚು ಜೋಡೆತ್ತಿನ ಕೃಷಿಕರಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಜಗತ್ತಿನ ಯಾವುದೇ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಮ್ಮುಖದಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿ ನೋಡಿದರೆ, ಗ್ರಾಮದಲ್ಲಿ ಕೃಷಿ, ಜಂಗಮ, ಬಡಿಗೇರ, ಕುಂಬಾರ, ಕಂಬಾರ, ಚಮ್ಮಾರ ಹೀಗೆ ವಿವಿಧ ಕಾಯಕಗಳಿಗೆ ಭದ್ರತೆ ಇರುವುದರ ಜೊತೆಗೆ ದೇಸಿ ಆಕಳು, ಎಮ್ಮೆ, ಆಡು, ನಾಯಿ ಹೀಗೆ ವಿವಿಧ ಜೀವ ವೈವಿಧ್ಯತೆ ಉಳಿದು ಬಹು ಜನರು ಆರೋಗ್ಯಭರಿತವಾಗಿ ಇರುವುದನ್ನು ನೋಡಬಹುದಾಗಿದೆ. ಇಂತಹ ಗ್ರಾಮವನ್ನು ಮಾದರಿಯಾಗಿ ಇಟ್ಟುಕೊಂಡು ಹೊಸ ತಂತ್ರಜ್ಞಾನ ಆಧಾರಿತ ನಂದಿ ಗ್ರಾಮ ಸ್ವರಾಜ್ಯ ಯೋಜನೆಯನ್ನು ಜಾರಿಗೆ ತರಲು ನಾವೆಲ್ಲರೂ ಒಗ್ಗೂಡಬೇಕಾಗಿದೆ.

ಹಿಂದಿನಿAದ ಜಗತ್ತಿನಲ್ಲಿ ಅತೀ ಹೆಚ್ಚು ಸನ್ಯಾಸಿಗಳನ್ನು ಹೊಂದಿದ ದೇಶ ಭಾರತವಾಗಿರುವುದಕ್ಕೆ ಮೂಲ ಕಾರಣ ಕೃಷಿ ಸಂಸ್ಕೃತಿಯನ್ನು ಉಳಿಸುತ್ತಾ ಬಂದಿರುವ ಜೋಡೆತ್ತಿನ ಕೃಷಿಕರ ಸಂಖ್ಯೆ ಹೆಚ್ಚಿಗೆ ಇರುವುದಾಗಿದೆ. ಭಾರತ ದೇಶದ ಗುರು-ಶಿಷ್ಯ ಪರಂಪರೆಯ ಮೂಲ ಕೊಂಡಿಯಾಗಿ  ನಂದಿ ಶಕ್ತಿ ಕೆಲಸ ಮಾಡುತ್ತಾ ಬಂದಿದೆ. ಇದೇ ಕಾರಣಕ್ಕೆ ಗುರು-ವಿರಕ್ತರ ಮಠಗಳಲ್ಲಿ ಹಾಗೂ ಶಿವಾಲಯಗಳಲ್ಲಿ ನಂದಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದನ್ನು ಕಾಣುತ್ತೇವೆ. ಭಾರತ ದೇಶದ ಆಧ್ಯಾತ್ಮಿಕ ಹಾಗೂ ರಾಜಕೀಯ ಶಕ್ತಿಯ ಮೂಲ ಬೇರಾದ ನಂದಿ ಸಂಪತ್ತು ನಾಶವಾದಂತೆ ಆಧ್ಯಾತ್ಮಿಕ ಹಾಗೂ ರಾಜಕೀಯ ನಾಯಕರ ಅಸ್ತಿತ್ವಕ್ಕೆ ಕೊಡಲೆ ಪೆಟ್ಟು ಬೀಳಲು ಪ್ರಾರಂಭಿಸಿದೆ. ಇದರಿಂದ ಸಮಾಜದಲ್ಲಿ ಹಲವು ರೀತಿಯ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗುತ್ತಿವೆ. ಈ ಸಂದರ್ಭದಲ್ಲಿ ನಾವೆಲ್ಲರೂ ನಂದಿ ಶಕ್ತಿಗೆ ತಲೆಬಾಗುವುದು ಮಾತ್ರ ಪರಿಹಾರ ಎಂಬುದನ್ನು ಆಧುನಿಕ ವಿಜ್ಞಾನ ಸ್ಪಷ್ಟವಾಗಿ ತಿಳಿಸುತ್ತಿದೆ. ನಂದಿ ಶಕ್ತಿಯ ಸಮರ್ಥ ಬಳಕೆಯ ಮೂಲಕ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿಸಲು ಸರ್ವರೂ ಕೂಡ ಒಗ್ಗೂಡಬೇಕಾಗಿದೆ. “ನಂದಿಯಿAದ ನಾವೆಲ್ಲರೂ ಒಂದಾದರೆ ಮಾತ್ರ ಸರ್ವಧರ್ಮದ ಜನರಿಗೆ ಒಳ್ಳೆಯ ಭವಿಷ್ಯವಿದೆ” ಎಂಬ ಸತ್ಯದ ಅರಿವನ್ನು ಮೂಡಿಸುತ್ತಾ ಭಾರತವನ್ನು ವಿಶ್ವಗುರುವನ್ನಾಗಿಸುವ ಗುರಿಯೊಂದಿಗೆ ಮುನ್ನಡೆಯಬೇಕಾದ ಅವಶ್ಯಕತೆ ಬಂದೊದಗಿದೆ...ಯೋಚಿಸಿ!

ನಂದಿ ಮತ ಕ್ರೋಢೀಕರಣ ಮಾರ್ಗಗಳು  

ತೈಲ ಶಕ್ತಿ ಬಳಕೆಗೆ ಸರ್ಕಾರಗಳು ಹೆಚ್ಚಿಗೆ ಪ್ರೋತ್ಸಾಹ ನೀಡಿದಂತೆ ಗ್ರಾಮಗಳಲ್ಲಿರುವ ನಂದಿ ಸಂಪತ್ತು ನಾಶವಾಗಿ ಗ್ರಾಮಗಳು ಪರಾವಲಂಬಿಗಳಾಗಿ ತಮ್ಮ ಮೂಲ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿವೆ. ಸಮಾಜವು ಹಲವು ರೀತಿಯಲ್ಲಿ ವಿಷಮಯವಾಗುತ್ತಿರುವುದರ ಲಕ್ಷಣ ಈಗಾಗಲೇ ಗೋಚರಿಸುತ್ತಿದೆ. ಕೇವಲ ಒಂದು ವರ್ಷ ತೈಲ ಪೂರೈಕೆ ನಿಂತರೆ ನಮ್ಮೆಲ್ಲರ ಬದುಕು ಅಲ್ಲೋಲ ಕಲ್ಲೋಲವಾಗುವ ಪರಿಸ್ಥಿತಿಯನ್ನು ನಾವಿಂದು ನಿರ್ಮಿಸಿಕೊಂಡಿದ್ದೇವೆ. ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ, ಮೂರನೇ ಮಹಾಯುದ್ಧ ಘಟಿಸಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಹೊಸ ತಂತ್ರಜ್ಞಾನಗಳಿAದ ನಂದಿ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡು ನಮ್ಮ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಿಕೊಳ್ಳಬೇಕಾದ ಅವಶ್ಯಕತೆ ಬಂದೊದಗಿದೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂದಿ ಆಧಾರಿತ ಯೋಜನೆಗಳನ್ನು ಜಾರಿಗೆ ತಂದು ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿಸುವ ಸಾಮರ್ಥ್ಯವಿರುವ ನಾಯಕರಿಗೆ ಮತ ನೀಡಲು ಪಕ್ಷಭೇದ ಮರೆತು ಒಂದಾದರೆ ಮಾತ್ರ ನಮಗೆಲ್ಲ ಒಳ್ಳೆಯ ಭವಿಷ್ಯವಿದೆ. ನಂದಿ ಆಧಾರಿತವಾಗಿ ಮತಗಳನ್ನು ಕ್ರೋಢೀಕರಿಸಬಹುದಾದ ಪ್ರಮುಖ ೪ ಮಾರ್ಗಗಳು ಈ ಕೆಳಗಿನಂತಿವೆ.

ಅ. ಕಾಯಕ ಮಾರ್ಗದಿಂದ ನಂದಿ ಮತ ಕ್ರೋಢೀಕರಣ

  1. ಜೋಡೆತ್ತಿನ ಕೃಷಿಕರು ಹಾಗೂ ಆಕಳು ಸಾಕಾಣಿಕೆದಾರರ ಶ್ರಮಕ್ಕೆ ತಕ್ಕ ಪ್ರೋತ್ಸಾಹ ನೀಡುವ ಯೋಜನೆ ಜಾರಿಗೆ ತರುವ ಭರವಸೆ
  2. ನಂದಿಯಿAದ ಪಶು ಸಂಪತ್ತು ಹೆಚ್ಚಿಸಿ ಎಲ್ಲ ರೈತರಿಗೆ ಕಡಿಮೆ ದರದಲ್ಲಿ ತಿಪ್ಪೆ ಗೊಬ್ಬರ ದೊರೆಯುವಂತೆ ಮಾಡುವ ಭರವಸೆ.
  3. ಪರಿಸರ ಸ್ನೇಹಿ ಗೊಬ್ಬರ, ಪೀಡೆ ನಾಶಕ ಹಾಗೂ ಕೀಟ ನಾಶಕಗಳನ್ನು ತಯಾರಿಸಿ ರೈತರಿಗೆ ದೊರೆಯುವಂತೆ ಮಾಡುವ ಭರವಸೆ
  4. ಕೃಷಿ ಕಾರ್ಮಿಕರು, ಜಂಗಮ, ಬಡಿಗೇರ, ಕಂಬಾರ, ಕುಂಬಾರ, ಮಡಿವಾಳ, ಚಮ್ಮಾರ, ಹೀಗೆ ಅನೇಕ ಸಮುದಾಯಕ್ಕೆ ತಮ್ಮ ಗ್ರಾಮದಲ್ಲಿ ಉದ್ಯೋಗದ ಭದ್ರತೆ ನೀಡುವ ಭರವಸೆ.
  5. ಸ್ವಂತ ಗ್ರಾಮದಲ್ಲಿ ನಂದಿ ಆಧಾರಿತ ಆರೋಗ್ಯ ಉತ್ಪನ್ನಗಳ ತಯಾರಿಕೆಗೆ ಸಂಬAಧಿಸಿದ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ.
  6. ೧೨.    ಹೊಸ ತಂತ್ರಜ್ಞಾನದ ಮೂಲಕ ಗ್ರಾಮದಲ್ಲಿ ಬಯೋಗ್ಯಾಸ್ ಉತ್ಪಾದಿಸಿ ಸಿಲಿಂಡರ್ ಮೂಲಕ ಕಡಿಮೆ ದರದಲ್ಲಿ ವಿತರಿಸುವ ಭರವಸೆ.
  7. ನಂದಿ ಚಾಲಿತ ಗಾಣಗಳ ಮೂಲಕ ಪರಿಶುದ್ಧವಾದ ಅಡುಗೆ ಎಣ್ಣೆ ಹಾಗೂ ವಿದ್ಯತ್ ತಯಾರಿಸಿ ವಿತರಿಸುವ ಭರವಸೆ.

ಬ. ಜ್ಞಾನ ಮಾರ್ಗದಿಂದ ನಂದಿ ಮತ ಕ್ರೋಢೀಕರಣ

  1. ಸರ್ಕಾರಿ ಹಾಗೂ ಖಾಸಗಿ ನೌಕರರಿಗೆ ಮುಂದೆ ಉದ್ಯೋಗದ ಭದ್ರತೆ ಉಳಿಯಬೇಕಾದರೆ ನಂದಿಗಾಗಿ ಮತ ಮೀಸಲಿಡಲು ಕರೆ.
  2. ವಿದ್ಯಾವಂತರು ವಿಜ್ಞಾನಿಗಳೊಂದಿಗೆ ಚರ್ಚಿಸಿ ನಂದಿಗಾಗಿ ಮತ ಮೀಸಲಿಡಲು ಕರೆ.
  3. ಯುವಕರು ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗದ ಭದ್ರತೆ ದೊರೆಯಬೇಕಾದರೆ ನಂದಿಗಾಗಿ ಮತ ಮೀಸಲಿಡಲು ಕರೆ. 
  4. ನಂದಿ ಶಕ್ತಿಯ ಬಳಕೆಯಿಂದ ಪ್ರತಿಯೊಬ್ಬರ ಆರೋಗ್ಯದ ಮೇಲಾಗುವ ವೈಜ್ಞಾನಿಕ ಬದಲಾವಣೆಗಳ ಕುರಿತು ಅರಿವು ಮೂಡಿಸುವುದು.

ಕ. ಭಕ್ತಿ ಮಾರ್ಗದಿಂದ ನಂದಿ ಮತ ಕ್ರೋಢೀಕರಣ

  1. ಆಧ್ಯಾತ್ಮಿಕ ನಾಯಕರು ನಂದಿ ಆಧಾರಿತ ಆಚರಣೆಗಳ ಹಿಂದಿರುವ ವೈಜ್ಞಾನಿಕ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡುವುದು.
  2. ಮನೆಯ ದೇವರು ನಂದೀಶ್ವರ ಅಥವಾ ಬಸವೇಶ್ವರ ಇರುವವರು ನಂದಿಗಾಗಿ ಮತ ಮೀಸಲಿಟ್ಟು ನಂದಿದೇವನ ಕೃಪೆಗೆ ಪಾತ್ರರಾಗಲು ಕರೆ
  3. ಶಿವಾಲಯದಲ್ಲಿರುವ ಲಿಂಗಕ್ಕೆ ತಲೆ ಬಾಗುವವರು ಲಿಂಗದ ಮುಂದಿರುವ ನಂದಿಗಾಗಿ ಮತ ಮೀಸಲಿಟ್ಟು ಶಿವನ ಕೃಪೆಗೆ ಪಾತ್ರರಾಗಲು ಕರೆ
  4. ನಂದಿ ಸಂತತಿಯಿAದ ತಯಾರಾದ ವಿಭೂತಿಯನ್ನು ಹಚ್ಚುವವರು ನಂದಿಗಾಗಿ ಮತ ಮೀಸಲಿಡಲು ಕರೆ.
  5. ಮನೆಯ ಜಗುಲಿಯ ಮೇಲೆ ನಂದಿ ಮೂರ್ತಿಯನ್ನು ಇಟ್ಟು ಪೂಜಿಸುವವರು ನಂದಿಗಾಗಿ ಮತ ಮೀಸಲಿಡಲು ಕರೆ.
  6. ನಂದಿ ತತ್ವ ಉಳಿಸುವ ಪ್ರಮುಖ ಆಚರಣೆಗಳಾದ ಕಂಬಿ ಮಲ್ಲಯ್ಯ, ಬಸವ ಜಯಂತಿ, ಕಾರ ಹುಣ್ಣಿಮೆ, ಮಣ್ಣೆತ್ತಿನ ಅಮವಾಸ್ಯೆ, ಸಂಕ್ರಾAತಿ, ದನಗಳ ಜಾತ್ರೆ, ತೇರಿನ ಮೇಲೆ ನಂದಿ ಧ್ವಜ ಏರಿಸುವುದು, ನಂದಿ ಕೋಲು ಪೂಜಾ ಆಚರಣೆಗಳನ್ನು ಪಾಲಿಸುವ ಭಕ್ತ ಸಮೂಹಕ್ಕೆ ನಂದಿಗಾಗಿ ಮತ ಮೀಸಲಿಡಲು ಕರೆ ನೀಡುವುದು.


 ಜೈ ನಂದಿ, ಜೈ ಹಿಂದು, ಜೈ ಭಾರತ 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: missionsavesoil.com


No comments:

Post a Comment

ಪೂಜ್ಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಬಸವಕಲ್ಯಾಣದ ಪರುಷ ಕಟ್ಟೆಯಲ್ಲಿದೆಯೇ ಪರಿಹಾರ?

  ಪೂಜ್ಯರು ನಂದಿಯಿಂದ ಒಂದಾದರೆ ಭಾರತದ ಸಂವಿಧಾನ ಉಳಿಯಲು ಸಾಧ್ಯವೆಂದು ಬಸವ ಕಲ್ಯಾಣದ ಪರುಷ ಕಟ್ಟೆಯ ಇತಿಹಾಸ ತಿಳಿಸುತ್ತಿದೆಯೇ? ಬಸವನ ಬಾಗೇವಾಡಿಯ ಮೂಲ ನಂದೀಶ್ವರನ ಕೃಪೆಯ...